ಆರು ವರ್ಷ ಜೈಲಲ್ಲಿದ್ದವ ಈಗ ಗ್ರಾಮದ ಮುಖ್ಯಸ್ಥ! ಜೈಲಿಂದನೇ ನಾಮಪತ್ರ ಸಲ್ಲಿಸಿದ್ದವ ಭಾರೀ ಅಂತರದೊಂದಿಗೆ ಗೆದ್ದ

jail
Published on

ಲಖನೌ: ಜೈಲಿನಲ್ಲಿ ಇದ್ದು ಬಂದವರನ್ನು ಜನರು ಕೀಳಾಗಿ ನೋಡುತ್ತಾರೆ, ಎಲ್ಲರೊಂದಿಗೆ ಸೆರವುದಕ್ಕೆ ಅವಕಾಶ ಸಿಗುವುದಿಲ್ಲ ಎನ್ನುವುದು ನಮ್ಮ ನಿಮ್ಮ ಕಲ್ಪನೆ. ಆದರೆ ಈ ಒಂದು ಗ್ರಾಮದ ಕಥೆಯೇ ಬೇರೆ. ಇಲ್ಲಿ ಆರು ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದವನನ್ನೇ ಗ್ರಾಮಸ್ಥರು ಮುಖ್ಯಸ್ಥನನ್ನಾಗಿ ಆಯ್ಕೆ ಮಾಡಿದ್ದಾರೆ.

ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಛುನಾವ್ ಗ್ರಾಮದಲ್ಲಿ ಈ ರೀತಿ ವಿಶೇಷತೆಯಿದೆ. ಇಲ್ಲಿನ ರಾಮದಾಸ್​ ಹೆಸರಿನ ವ್ಯಕ್ತಿ ಕಳೆದ ಆರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾನೆ. ಕಳ್ಳತನ, ಮೋಸ, ವಂಚನೆ, ಕೊಲೆ ಸೇರಿ ಒಟ್ಟು 12 ಪ್ರಕರಣಗಳು ಆತನ ವಿರುದ್ಧವಿದೆ. ಹಾಗಿದ್ದರೂ ಗ್ರಾಮಸ್ಥರು ಆತನನ್ನೇ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ.

ಅಂದ ಹಾಗೆ ಈ ರಾಮದಾಸ್​ ಪಂಚಾಯತಿ ಚುನಾವಣೆಗೆ ನಿಲ್ಲಲು ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದನಂತೆ. ರಾಮದಾಸ್​ಗೆ 786 ಮತಗಳು ಬಂದಿದ್ದರೆ ಆತನ ಪ್ರತಿಸ್ಪರ್ಧಿಗೆ ಕೇವಲ 300 ಮತಗಳು ಬಂದಿವೆ. ಗ್ರಾಮಸ್ಥರು ಇಟ್ಟಿರುವ ನಂಬಿಕೆಯ ಬಗ್ಗೆ ಮಾತನಾಡಿರುವ ಆತ, ಇನ್ನೆಂದೂ ತಪ್ಪು ಕೆಲಸ ಮಾಡುವುದಿಲ್ಲ, ಗ್ರಾಮಕ್ಕಾಗಿ ದುಡಿಯುತ್ತೇನೆ ಎಂದು ಭರವಸೆ ನೀಡಿದ್ದಾನೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net