ಹಬ್ಬ ನೋಡಲೆಂದು ಹೋಗಿ ಸಾವಿಗೀಡಾದ; ಪಕ್ಕೆಗೇ ತಿವಿದ ಕೊಬ್ಬರಿ ಹೋರಿ

Bull
Published on

ಹಾವೇರಿ: ಹಬ್ಬ ನೋಡಲೆಂದು ಹೋದ ವ್ಯಕ್ತಿಯೊಬ್ಬ ಸಾವಿಗೀಡಾದ ಪ್ರಸಂಗವೊಂದು ನಡೆದಿದೆ. ಕೊಬ್ಬರಿ ಹೋರಿ ತಿವಿದ ಪರಿಣಾಮವಾಗಿ ವ್ಯಕ್ತಿ ಸಾವಿಗೀಡಾಗಿದ್ದಾನೆ. ಹಾವೇರಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಬಾಸುರು ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಹಬ್ಬದಲ್ಲಿ ಈ ಅವಘಡ ಸಂಭವಿಸಿದೆ. ಸಂಗೂರಿನ ಯುವಕ ಮಂಜುನಾಥ ಮೈಲಾರಪ್ಪ ಚಳ್ಳಕ್ಕನವರ (29) ಸಾವಿಗೀಡಾದ ವ್ಯಕ್ತಿ.

ಹೋರಿ ಬೆದರಿಸುವ ಹಬ್ಬ ನೋಡಲೆಂದು ಹೋಗಿ ನಿಂತಿದ್ದ. ಆಗ ಜೋರಾಗಿ ಓಡಿ ಬಂದಿದ್ದ ಹೋರಿ ಈತನ ಎಡ ಪಕ್ಕೆಗೆ ಬಲವಾಗಿ ತಿವಿದಿತ್ತು. ತಿವಿತದ ತೀವ್ರತೆಗೆ ಈತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಒಬ್ಬ ಸಾವಿಗೀಡಾದ್ದಷ್ಟೇ ಅಲ್ಲದೆ ಹೋರಿಹಬ್ಬ ನೋಡಲು ಬಂದಿದ್ದ ಇತರ 9 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಾದ ಶಿವಪ್ಪ ಲಮಾಣಿ ಕಬ್ಬೂರು, ಕುಮಾರ ಮಲ್ಲಪ್ಪ ಕಮ್ಮಾರ, ಸೋಮಣ್ಣ ಬಸಪ್ಪ ಬಿಳಗ್ಲಿ, ಪ್ರಶಾಂತ ರಮೇಶ ಮುಡಿ ಕಂಚಿನೆಗಳೂರು, ವಿರೂಪಾಕ್ಷ ಮುತ್ತಳ್ಳಿ, ಹೊನ್ನಪ್ಪ ಬಸಪ್ಪ ಕುರಬರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net