

ಲಖನೌ: ಅಕ್ರಮ ಸಂಬಂಧ ಹೊಂದಿ ತಪ್ಪು ಮಾಡುತ್ತಿದ್ದ ಮಗಳನ್ನು ವಿರೋಧಿಸಿದ್ದಕ್ಕೆ ಮಕ್ಕಳು ಮತ್ತು ಅಮ್ಮ ಸೇರಿಕೊಂಡು ತಂದೆಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ದೇಹದ ಶೇ. 30 ಭಾಗ ಸುಟ್ಟಿರುವ ವ್ಯಕ್ತಿ ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಮೊಹಮ್ಮದ್ ಅಮೀರ್ ಹೆಸರಿನ ವ್ಯಕ್ತಿಗೆ 21 ವರ್ಷ ಮತ್ತು 26 ವರ್ಷದ ಇಬ್ಬರು ಹೆಣ್ಣು ಮಕ್ಕಳು ಹಾಗೂ 24 ವರ್ಷದ ಮಗನೊಬ್ಬನಿದ್ದಾನೆ. ಒಬ್ಬ ಮಗಳು ಅಕ್ರಮ ಸಂಬಂಧವನ್ನು ಹೊಂದಿರುವ ವಿಚಾರ ಮೊಹಮ್ಮದ್ಗೆ ತಿಳಿದುಬಂದಿದೆ. ಈ ವಿಚಾರವಾಗಿ ಮನೆಯಲ್ಲಿ ಕೂಗಾಡಿದ್ದಾನೆ. ಸಂಬಂಧವನ್ನು ಮುರಿದುಕೊಳ್ಳುವಂತೆ ಎಚ್ಚರಿಸಿದ್ದಾನೆ. ಆದರೆ ಸಿಟ್ಟಿಗೆದ್ದ ಮನೆಯವರು, ಮೊಹಮ್ಮದ್ನ್ನು ಕೊಲ್ಲುವ ನಿರ್ಧಾರ ಮಾಡಿದ್ದಾರೆ.
ಜನವರಿ 5ರಂದು ಮೊಹಮ್ಮದ್ ದೇಹದ ಮೇಲೆ ಪೆಟ್ರೋಲ್ ಸುರಿದು ಸುಡಲಾಗಿದೆ. ಹೆಂಡತಿ, ಮಗಳು ಮತ್ತು ಮಗ ಸೇರಿಕೊಂಡು ಈ ಕೃತ್ಯ ಮಾಡಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಅಪ್ಪನಿಗೆ ಬೆಂಕಿ ಹಚ್ಚಿ ಮನೆಯವರೆಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳೀಯರ ಮಾಹಿತಿಯ ಮೇರೆಗೆ ಮನೆಗೆ ಬಂದ ಪೊಲೀಸರಿಗೆ ಅರೆಬೆಂದ ಮೊಹಮ್ಮದ್ನ ದೇಹ ಸಿಕ್ಕಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೇಳಿಕೆ ಪಡೆಯಲಾಗಿದೆ. ಇದೀಗ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. (ಏಜೆನ್ಸೀಸ್)