

ನವದೆಹಲಿ: ಪರಪುರುಷನೊಂದಿಗೆ ಪತ್ನಿಯನ್ನು ಕಂಡ ಪತಿ ಇಬ್ಬರನ್ನೂ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದಾನೆ. ಹೆಂಡತಿ ಸವಾಲೆಸೆದ ಹಾಗೆ ರೆಡ್ ಹ್ಯಾಂಡೆಡ್ ಆಗಿಯೇ ಇಬ್ಬರನ್ನೂ ಪತ್ತೆ ಹಚ್ಚಿದ ಗಂಡ, ಬಹಿರಂಗವಾಗಿ ತನ್ನ ಆಕ್ರೋಶವನ್ನು ಅವರಿಬ್ಬರ ಮೇಲೆ ತೀರಿಸಿಕೊಂಡಿದ್ದಾನೆ.
ಗುಜರಾತ್ನ ಸೂರತ್ನ ವಲ್ಸಡ್ ಎಂಬ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಪತಿಗೆ ಪತ್ನಿಯ ಮೇಲೆ ಅನುಮಾನವಿದ್ದು, ಅದನ್ನು ವ್ಯಕ್ತಪಡಿಸಿದ್ದಕ್ಕೆ ಆಕೆ ಆತನನ್ನು ಬಿಟ್ಟು ತವರು ಮನೆಯಲ್ಲಿ ವಾಸಿಸಲು ಆರಂಭಿಸಿದ್ದಳು. ಕಜ್ಲಿ ಗ್ರಾಮದಲ್ಲಿರುವ ತಾಯಿಯ ಮನೆಗೆ ಹೋಗುವಾಗ ಪತ್ನಿ ಸವಾಲೆಸೆದು ಬೇರೆ ಹೋಗಿದ್ದಳು. ನನಗೆ ಅನೈತಿಕ ಸಂಬಂಧ ಇರುವುದೇ ಹೌದಾದರೆ ರೆಡ್ ಹ್ಯಾಂಡೆಡ್ ಆಗಿ ಪತ್ತೆ ಹಚ್ಚುವಂತೆ ಆಕೆ ಸವಾಲೆಸೆದಿದ್ದಳು.
ಹೀಗಾಗಿ ಪತಿ ದೂರವಿದ್ದರೂ ಆಕೆಯ ಚಲನವಲನಗಳ ಮೇಲೆ ಒಂದು ನಿಗಾ ಇರಿಸಿದ್ದ. ಭಾನುವಾರ ಆಕೆ ತನ್ನ ಪ್ರೇಮಿಯನ್ನು ಮನೆಯೊಂದಕ್ಕೆ ಕರೆಸಿಕೊಂಡಿದ್ದಳು. ಇದರ ಸುಳಿವು ಸಿಕ್ಕು ಅಲ್ಲಿಗೆ ಹೋದ ಪತಿ, ಇರಬಾರದ ಸ್ಥಿತಿಯಲ್ಲಿ ಇದ್ದ ಇಬ್ಬರನ್ನೂ ಕೋಣೆಯಿಂದ ಹೊರಕ್ಕೆ ಎಳೆದು ಕಂಬಕ್ಕೆ ಕಟ್ಟಿ ಥಳಿಸಿದ್ದಾನೆ. ನಂತರ ಸ್ಥಳೀಯರು ಬಂದು ತಪ್ಪಿಸಲು ಯತ್ನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದಾಗ ಆಕೆ ಹಾಗೂ ಪ್ರೇಮಿ ದೂರು ನೀಡಲು ನಿರಾಕರಿಸಿದ್ದರು. ಪತಿಯನ್ನು ಮುಂಜಾಗರೂಕತೆ ಕ್ರಮವಾಗಿ ವಶಕ್ಕೆ ಪಡೆದಿದ್ದ ಪೊಲೀಸರು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.