ಎರಡನೇ ಮದುವೆಗೆ ಅಡ್ಡಿಯಾದರೆಂದು ತನ್ನ ಇಬ್ಬರು ಹೆಣ್ಣು ಮಕ್ಕಳನ್ನೇ ಕೊಂದ ಪಾಪಿ ತಂದೆ

Crime
Published on

ಡೆಹ್ರಡೂನ್​: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ಎರಡನೇ ಮದುವೆಯಾಗುವ ಸಲುವಾಗಿ ತನ್ನ ಇಬ್ಬರು ಹೆಣ್ಣು ಮಕ್ಕಳ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಉತ್ತರಾಖಂಡದ ಡೆಹ್ರಡೂನಿನ ದೋಯಿವಾಲಾ ಎಂಬ ಪ್ರದೇಶದಲ್ಲಿ ನಡೆದಿದೆ.

ಆರೋಪಿ ಜಿತೇಂದ್ರ ತಲೆಮಾರಿಸಿಕೊಂಡಿದ್ದು, ಆತನನ್ನು ಪತ್ತೆ ಹಚ್ಚಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳಳು ತಿಳಿಸಿದ್ಧಾರೆ.

ಮೊದಲೇ ಮದುವೆಯಾಗಿತ್ತು

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಡೆಹ್ರಡೂನ್ SSP ರಾಕೇಶ್​ ಷಾ ಆರೋಪಿ ಜಿತೇಂದ್ರನಿಗೆ ಐದು ವರ್ಷಗಳ ಹಿಂದೆ ರೀನಾ ಎಂಬುವವರ ಜೊತೆ ಮದುವೆಯಾಗಿದ್ದು, ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆರೋಪಿಯೂ ಪ್ರತಿನಿತ್ಯ ತನ್ನ ಹೆಂಡತಿ ಹಾಗೂ ಮಕ್ಕಳನ್ನು ನಿಂದಿಸಿ ಹಲ್ಲೆ ನಡೆಸುತ್ತಿದ್ದ. ಇದರಿಂದ ತೀವ್ರವಾಗಿ ಮುನಿಸಿಕೊಂಡ ಆತನ ಪತ್ನಿ ಮಕ್ಕಳನ್ನು ಅವನ ಬಳಿಯೇ ಬಿಟ್ಟು ಹೈದರಾಬಾದ್​ಗೆ ತೆರಳಿದ್ದಳು.

Crime Spot
ಕೃತ್ಯ ನಡೆದ ಸ್ಥಳ

ಹೈದರಾಬಾದ್​ಗೆ ತೆರಳಿ ವರ್ಷಗಳಾದರೂ ಪತ್ನಿ ವಾಪಸ್​ ಬಾರದ ಹಿನ್ನಲೆಯಲ್ಲಿ ಆರೋಪಿಯೂ ಎರಡನೇ ಮದುವೆ ಮಾಡಿಕೊಳ್ಳಲು ತಯಾರಿ ನಡೆಸಿದ್ದ. ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ ಎಂಬ ವಿಚಾರ ತಿಳಿದರೆ ಎಲ್ಲಿ ಹೆಣ್ಣು ಕೊಡುವುದಿಲ್ಲ ಎಂದು ಭಾವಿಸಿ ಉಪಾಯ ಮಾಡಿ ತನ್ನ ಬ್ಬರು ಮಕ್ಕಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.

ಕತ್ತು ಹಿಸುಕಿ ಕೊಲೆ

ಅದರಂತೆ, ಶುಕ್ರವಾರ ಸಂಜೆ ಆರೋಪಿಯೂ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ, ಮಕ್ಕಳನ್ನು ಭೇಟಿಯಾಗುವ ನೆಪದಲ್ಲಿ ಯಾರು ಇಲ್ಲದ ವೇಳೆ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ಧಾನೆ. ಆರೋಪಿಯ ಅತ್ತೆ ಆಶು ದೇವಿ ಮನೆಗೆ ವಾಪಸ್​ ಆದಾಗ ಕೃತ್ಯ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ.

ಆರೋಪಿ ಜಿತೇಂದ್ರ ಮಕ್ಕಳನ್ನು ಕೊಲೆ ಮಾಡಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ವಿಶೇಷ ತಂಡ ಒಂದನ್ನು ರಚಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಡೆಹ್ರಡೂನ್​ SSP ರಾಕೇಶ್​ ಷಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net