

ನವದೆಹಲಿ: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಬರ್ಬರವಾಗಿ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ಈಶಾನ್ಯ ದೆಹಲಿಯ ದಯಾಳ್ಪುರದಲ್ಲಿ ನಡೆದಿದೆ.
ಗಾಯಾಳು ಯುವಕನನ್ನು ಸೋನು(19) ಹಾಗೂ ರಾಹುಲ್(19) ಎಂದು ಗುರುತಿಸಲಾಗಿದ್ದು, ಆರೋಪಿ ಮೊಹಮ್ಮದ್ ಜೈದ್(20) ತಲೆಮಾರಿಸಿಕೊಂಡಿದ್ಧಾನೆ ಎಂದು ಪೊಲೀಸರು ತಿಳಿಸಿದ್ಧಾರೆ.
ಈಶಾನ್ಯ ದೆಹಲಿಯ ಬ್ರಿಜ್ಪುರಿ ನಿವಾಸಿ ಸೋನು ತಮ್ಮ ಸಂಬಂಧಿಕರೊಬ್ಬರ ಜೊತೆ ಶಿಬ್ಬಾನ್ ಸ್ಕೂಲ್ ಬಳಿ ಇರುವ ಅಂಗಡಿಯೊಂದಲ್ಲಿ ಐಸ್ಕ್ರೀಂ ಸೇವಿಸಲು ತನ್ನ ಸಂಬಂಧಿ ರಾಹುಲ್ ಜೊತೆ ತೆರಳಿದ್ದರು. ಈ ವೇಳೆ ರಾಹುಲ್ ಹಾಗೂ ಆರೋಪಿ ಮೊಹಮ್ಮದ್ ಜೈದ್ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ.
ಈ ವೇಳೆ ಆರೋಪಿ ಜೈದ್ ರಾಹುಲ್ಗೆ ಚಾಕುವಿನಿಂದ ಸೊಂಟದ ಕೆಲಭಾಗಕ್ಕೆ ಇರಿದಿದ್ಧಾನೆ. ಜಗಳ ಬಿಡಿಸಲು ಹೋದ ಸೋನುವಿನ ಕೈಗೆ ಆರೋಪಿ ಇರಿದು ಪರಾರಿಯಾಗಿದ್ದಾನೆ. ರಕ್ತ ಮಡುವಿನಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ.
ಇದನ್ನೂ ಓದಿ: ನಟಿ ಖುಷ್ಬೂ ಸುಂದರ್ಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿ ಜೈದ್ನ ತಂದೆ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಗಾಯಾಳು ರಾಹುಲ್ನ ತಂದೆ ಐಸ್ಕ್ರೀಂ ಅಂಗಡಿಯೊಂದನ್ನು ನಡೆಸುತ್ತಿದ್ಧಾರೆ. ಇಬ್ಬರ ನಡುವೆ ಇಗೋ ಕ್ಲ್ಯಾಶ್ ಇದ್ದ ಕಾರಣ ತಾವು ಮಾಡುತ್ತಿದ್ದ ವೃತ್ತಿಯ ಕುರಿತು ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಜೈದ್ ಚಾಕುವಿನಿಮದ ಬರ್ಬರವಾಗಿ ಇರಿದು ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವವರನ್ನು ತೀವರ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಜೈದ್ ವಿರುದ್ಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ), 324ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಬ್ರಿಜ್ಪುರಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.