ಬೆಕ್ಕಿನ ಮರಿಗೆ ಬೆಂಕಿ ಹಚ್ಚಿ ಸಜೀವ ದಹನ ಮಾಡಿದ ಕ್ರೂರಿ; ಅವನ ಬಂಧನಕ್ಕೆ ಸಹಕರಿಸಿದವರಿಗೆ 50 ಸಾವಿರ ರೂ.

Kitten
Published on

ಬೆಕ್ಕಿನ ಮರಿಗೆ ವ್ಯಕ್ತಿಯೋರ್ವ ಬೆಂಕಿ ಹಚ್ಚಿ, ಸಜೀವ ದಹನ ಮಾಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ. ಈ ಕ್ರೂರ ವಿಡಿಯೋಕ್ಕೆ ಎಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಮಧ್ಯೆ ಹೂಮನ್​ ಸೊಸೈಟಿ ಇಂಟರ್​​ನ್ಯಾಷನಲ್​/ಇಂಡಿಯಾ ಎಂಬ ಸಂಸ್ಥೆ, ಆರೋಪಿಯನ್ನು ಪತ್ತೆ ಹಚ್ಚಿ, ಅವನನ್ನು ಬಂಧಿಸಲು ಸಹಕರಿಸಿದವರಿಗೆ 50,000 ರೂ.ಬಹುಮಾನ ನೀಡುವುದಾಗಿ ಘೋಷಿಸಿದೆ.

ಬೆಕ್ಕಿನ ಮರಿಗೆ ಬೆಂಕಿ ಹಚ್ಚಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ, ಹೂಮನ್​ ಸೊಸೈಟಿ ಇಂಟರ್​​ನ್ಯಾಷನಲ್​/ಇಂಡಿಯಾ ಕೂಡ ಅದನ್ನು ಶೇರ್​ ಮಾಡಿಕೊಂಡಿದೆ. ಅದರಲ್ಲಿ ಅಪರಿಚಿತ ವ್ಯಕ್ತಿಯೋರ್ವ ಪುಟ್ಟ ಬೆಕ್ಕಿನ ಮರಿಗೆ ಲೈಟರ್ ಮೂಲಕ ಬೆಂಕಿ ಹಚ್ಚುವ ಕ್ರೂರ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ: ಲಾಕ್​ಡೌನ್ ಟೈಮಲ್ಲಿ ಖರ್ಚಿಲ್ಲದೇ ಹೆಣ್ಣುಮಕ್ಕಳ ಮದುವೆ ಮಾಡೋಕೆ ಹೊರಟ ತಂದೆಗೆ ಅಡ್ಡಿಯಾಗಿದ್ದೇನು…?

ಈಗ ಈ ವ್ಯಕ್ತಿಯನ್ನು ಹಾಗೇ ಬಿಟ್ಟರೆ ಇಂಥದ್ದೇ ಕೆಲಸವನ್ನು ಮತ್ತೆ ಮುಂದುವರಿಸುತ್ತಾನೆ. ಅಷ್ಟೇ ಅಲ್ಲ, ಹಿಂದೆ ಅದೆಷ್ಟು ಬೆಕ್ಕು, ನಾಯಿಗಳನ್ನು ಅವನು ಬೆಂಕಿ ಹಚ್ಚಿ ಕೊಂದಿದ್ದಾನೆ ಎಂಬುದೂ ಗೊತ್ತಿಲ್ಲ. ಶೀಘ್ರವೇ ಕಾರ್ಯಪ್ರವೃತ್ತವಾಗಿ ಆತನನ್ನು ಬಂಧಿಸಬೇಕು. ಹಾಗಾಗಿ ಆ ವ್ಯಕ್ತಿಯ ಪರಿಚಯ, ಇರುವ ಸ್ಥಳ ಮತ್ತಿತರ ಮಾಹಿತಿ ನೀಡಿ, ಬಂಧಿಸಲು ಸಹಕರಿಸಿದರೆ, ಅವರಿಗೆ 50 ಸಾವಿರ ರೂ. ನೀಡುತ್ತೇವೆ ಎಂದು ಅವರು ಸಂಸ್ಥೆ ಹೇಳಿದೆ.

ಪ್ರಾಣಿ ರಕ್ಷಣಾ ಸಂಸ್ಥೆಗೆ ಅಥವಾ ಪೊಲೀಸರಿಗಾದರೂ ವಿಷಯ ತಿಳಿಸಬಹುದು. ನಮಗೇ ಮಾಹಿತಿ ನೀಡಬಹುದು ಎಂದು ಸಾರ್ವಜನಿಕರ ಬಳಿ ಮನವಿ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net