ಅಮ್ಮನನ್ನು ನೋಡಿಕೊಳ್ಳಲು ಬಂದವಳ ಮೇಲೆ ಲವ್​; ಅವಳು ಪ್ರೀತಿಸಿದ್ದು ಅಪ್ಪನನ್ನು!

dire
Published on

ಫ್ಲೋರಿಡಾ: ತ್ರಿಕೋನ ಲವ್​ ಸ್ಟೋರಿಯಲ್ಲಿ ಯಾರಾದರೂ ಒಬ್ಬರು ನೋವನ್ನು ಅನುಭವಿಸಲೇಬೇಕಾಗುತ್ತದೆ. ಅದೇ ರೀತಿ ಫ್ಲೋರಿಡಾದಲ್ಲೂ ಒಂದು ತ್ರಿಕೋನ ಲವ್​​ ಸ್ಟೋರಿ ಏರ್ಪಟ್ಟಿತ್ತು. ಆದರೆ ಈ ಪ್ರೀತಿಯಿಂದಾಗಿ ಕೇವಲ ಒಬ್ಬರಲ್ಲಿ ಮೂರೂ ಜನರೂ ನೋವಿನಲ್ಲೇ ಮುಳುಗುವಂತಾಗಿದೆ.

ಫ್ಲೋರಿಡಾದ ಲೂಯಿಸ್ ಏಂಜಲ್ ಕ್ವಿನೋನೆಜ್(53) ಹೆಸರಿನ ವ್ಯಕ್ತಿಯ ತಾಯಿಗೆ ಆರೋಗ್ಯ ಸರಿಯಿರಲಿಲ್ಲ. ಆದ ಕಾರಣ ಆತ ಏಂಜೆಲಿಕಾ ಅಕೋಸ್ಟಾ ಬ್ಲಾಂಕೊ(61) ಹೆಸರಿನ ಮಹಿಳೆಯನ್ನು ತಾಯಿಯ ಸೇವೆ ಮಾಡಲು ನೇಮಿಸಿಕೊಂಡಿದ್ದ. ಹಲವು ವರ್ಷಗಳಿಂದ ಆಕೆ ಆತನ ತಾಯಿಯ ಸೇವೆ ಮಾಡುತ್ತಿದ್ದಳು. ಇವರಿಬ್ಬರ ಜತೆ ಲೂಯಿಸ್​ನ ಮಲತಂದೆಯೂ ವಾಸಿಸುತ್ತಿದ್ದ. ಜತೆಯಲ್ಲಿ ಬದುಕುತ್ತಿದ್ದರಿಂದಾಗಿ ಏಂಜೆಲಿಕಾ ಮತ್ತು ಮಲತಂದೆಯ ನಡುವೆ ಪ್ರೀತಿ ಹುಟ್ಟಿದೆ. ಇವರಿಬ್ಬರ ನಡುವೆ ಸಂಬಂಧವೂ ಏರ್ಪಟ್ಟಿದೆ.

ಆದರೆ ಇನ್ನೊಂದತ್ತ ಲೂಯಿಸ್​, ಏಂಜೆಲಿಕಾ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಲಾರಂಭಿಸಿದ್ದಾನೆ. ಈ ವಿಚಾರವನ್ನು ಆಕೆಗೆ ಹೇಳಬೇಕೆನ್ನುವಷ್ಟರಲ್ಲಿ ಆಕೆ ತನ್ನ ಮಲತಂದೆಯ ಜತೆ ಸಂಬಂಧದಲ್ಲಿರುವುದು ತಿಳಿದುಬಂದಿದೆ. ಇದರಿಂದ ಸಿಟ್ಟಿಗೆದ್ದ ಲೂಯಿಸ್​ ಮಾಡಬಾರದ ತಪ್ಪನ್ನು ಮಾಡಿಬಿಟ್ಟಿದ್ದಾನೆ.

ಇತ್ತೀಚೆಗೆ ಒಂದು ದಿನ ರಾತ್ರಿ ಕುಡಿದು ಬಂದ ಲೂಯಿಸ್​, ಏಂಜೆಲಿಕಾ ಮೇಲೆ ಗ್ಯಾಸೋಲಿನ್​ ಸುರಿದು ಬೆಂಕಿ ಹಚ್ಚಿದ್ದಾನೆ. ಸ್ಥಳೀಯರಿಗೆ ಮಾಹಿತಿ ತಿಳಿದು ಅಗ್ನಿಶಾಮಕ ದಳ ಮತ್ತು ಆ್ಯಂಬುಲೆನ್ಸ್​ಗೆ ಕರೆ ಮಾಡಲಾಗಿದೆ. ಇದೀಗ ಏಜೆಂಲಿಕಾರನ್ನು ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net