

ಮುಂಬೈ: ಸೆಲೆಬ್ರಿಟಿಗಳ ಪಾಲಿಗೆ ಸಾಮಾಜಿಕ ಜಾಲತಾಣ ಎಷ್ಟು ಮುಖ್ಯವೋ? ಅಷ್ಟೇ ಶಾಪವೂ ಹೌದು. ಸೈಬರ್ ತೊಂದರೆಯಲ್ಲಿ ಸಿಲುಕೊಂಡವರಲ್ಲಿ ಬಹುತೇಕರು ಕಲಾವಿದರೆ. ಕೆಲವರು ಜಾಲತಾಣದಲ್ಲಿ ಎದುರಾಗುವ ಸಮಸ್ಯೆಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಆದರೆ, ಇನ್ನು ಕೆಲವರು ಮಾನಸಿಕವಾಗಿ ಕುಗ್ಗಿ ಬಿಡುತ್ತಾರೆ.
ಇದೇ ರೀತಿಯ ಸಮಸ್ಯೆಯೊಂದು ಬಾಲಿವುಡ್ ಕಿರುತೆರೆ ನಟಿ ಕವಿತಾ ಕೌಸಿಕ್ಗೆ ಎದುರಾಗಿದೆ. ಕವಿತಾ ಅವರು ಇತ್ತೀಚೆಗಷ್ಟೇ ತಮ್ಮ ಟ್ವಿಟರ್ನಲ್ಲಿ ವ್ಯಕ್ತಿಯೊಬ್ಬನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ವ್ಯಕ್ತಿಯೊಬ್ಬ ತನ್ನ ಮರ್ಮಾಂಗದ ಆಕ್ಷೇಪಾರ್ಹ ಫೋಟೋವನ್ನು ಶೇರ್ ಮಾಡಿಕೊಂಡಿರುವುದು ನಟಿಗೆ ಮುಜುಗರ ಅನುಭವಿಸುವಂತಾಗಿದೆ.
ಇದೀಗ ಮುಂಬೈ ಪೊಲೀಸ್, ಸೈಬರ್ ಸೆಲ್ ಮತ್ತು ಸರ್ಕಾರದ ಮೊರೆ ಹೋಗಿರುವ ಕವಿತಾ, ಅಶ್ಲೀಲ ಫೋಟೋ ಕಳುಹಿಸಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಆರೋಪಿಯ ಫೋಟೋ ಶೇರ್ ಮಾಡುವ ಮೂಲಕ ಈತನನ್ನು ಬಂಧಿಸುವುದು ಕಷ್ಟವೇನಲ್ಲ ಎಂದು ಕವಿತಾ ಅವರು ಟ್ವೀಟ್ ಮಾಡಿದ್ದು, @MumbaiPolice @MahaCyber1, @sushant_says, @AUThackeray@NCWIndia" ಟ್ಯಾಗ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಆರೋಪಿಯ ಬಗ್ಗೆ ಕೆಲ ಮಾಹಿತಿ ನೀಡಿರುವ ಕವಿತಾ, ಆತನ ಹೆಸರು ಶಂಕರ್. ಈತ ಬೇಕಂತಲೇ ಸೆಲೆಬ್ರಿಗಳಿಗೆ ತನ್ನ ಮರ್ಮಾಂಗದ ಫೋಟೋಗಳನ್ನು ಕಳುಹಿಸುತ್ತಾನೆ. ಈತ ಎಲ್ಲಿದ್ದಾನೆ ಎಂದು ನೋಡಿ ಈತನ ಬಗ್ಗೆ ತಿಳಿಸಿ ಎಂದು ಹೇಳಿದ್ದಾರೆ. (ಏಜೆನ್ಸೀಸ್)