'ನನಗೆ ಗಂಡು ಮಗುವೇ ಆಗುತ್ತೆ ನೋಡ್ತಿರು'; ಚಿರು ನುಡಿದ ಭವಿಷ್ಯ ನಿಜವಾಯ್ತು ಎಂದ ಧ್ರುವ

collage (16)
Published on

ಬೆಂಗಳೂರು: ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮೇಘನಾ ರಾಜ್​ ರಾಘವೇಂದ್ರ ರಾಯರ ದಿನವಾದ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಆರೋಗ್ಯವಾಗಿದ್ದು, ಜೂ, ಚಿರುವಿನ ಫೋಟೋ ಸಹ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ಅಣ್ಣನ ಮಗ ಆಗಮನವಾಗಿದ್ದಕ್ಕೆ ಧ್ರುವ ಸರ್ಜಾ ಸಂಭ್ರಮದಲ್ಲಿದ್ದಾರೆ.

‘ಕಳೆದ ನಾಲ್ಕು ತಿಂಗಳಿಂದ ನಮ್ಮ ಪರಿಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಇದೀಗ ಆ ಒಂದು ನೋವನ್ನ ಮರೆಸಲು ಅಣ್ಣನೇ ಮರಳಿ ಬಂದಿದ್ದಾನೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ. ಎತ್ತಿ ಮುದ್ದಾಡಿದ್ದೇನೆ. ಅಣ್ಣನನ್ನೇ ಎತ್ತಿ ಆಡಿಸದಂತಾಯ್ತು’ ಎಂದೂ ಹೇಳಿಕೊಂಡಿದ್ದಾರೆ.

ಇದಷ್ಟೇ ಅಲ್ಲ ಮೇಘನಾ ಗರ್ಭಿಣಿ ಆದ ಘಳಿಗೆಯಲ್ಲಿ ಚಿರು ಜತೆಗೆ ಮಾಡಿದ ತಮಾಷೆಯನ್ನೂ ಧ್ರುವ ಹೇಳಿಕೊಂಡಿದ್ದಾರೆ. ‘ಮುಂದೆ ನಿನಗೆ ಮಗು ಆಗಿ ಪೇರೆಂಟ್ಸ್ ಮೀಟಿಂಗ್​ಗೆ ಕರೀತಾರಲ್ಲ ಅದ್ಹೇಗೆ ಹೋಗ್ತಿಯಾ? ಏಕೆಂದರೆ, ನಿನ್ನ ಮೇಲೆಯೇ ಸಾಕಷ್ಟು ಕಂಪ್ಲೆಂಟ್​ಗಳಿವೆ ಎಂದಿದ್ದೆ. ಅದಕ್ಕವನು, ನನಗೂ ಗಂಡು ಮಗು ಆಗಲಿದೆ. ಆತನೂ ನನ್ನಷ್ಟೇ ಚೇಷ್ಟೆ ಮಾಡಲಿದ್ದಾನೆ ನೋಡ್ತಿರು ಎಂದು ಹೇಳಿದ್ದ’ ಎಂದು ಕೆಲ ತಿಂಗಳ ಹಿಂದೆ ಚಿರು ನುಡಿದ ಭವಿಷ್ಯವನ್ನೇ ಪುನರುಚ್ಛರಿಸಿದ್ದಾರೆ ಧ್ರುವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net