More

    VIDEO| ವೆಂಟಿಲೇಟರ್​ನೊಂದಿಗೆ ಜವಾನ್​ ಚಿತ್ರ ವೀಕ್ಷಿಸಲು ಬಂದ ಶಾರುಖ್​ ಅಭಿಮಾನಿ

    ಮುಂಬೈ: ಶಾರುಖ್ ಖಾನ್​-ಅಟ್ಲಿ ಕಾಂಬಿನೇಷನ್​ನ ಜವಾನ್ ಚಿತ್ರವು ಬಿಡುಗಡೆಯಾದ ದಿನದಿಂದಲೂ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆದಿದೆ. ಇದಲ್ಲದೆ ಕೆಲವು ಹೃದಯಸ್ಪರ್ಶಿ ವಿಡಿಯೋಗಳಿಂದಲೂ ಚಿತ್ರ ನೆಟ್ಟಿಗರ ಗಮನ ಸೆಳೆಯುತ್ತಿದೆ.

    ವ್ಯಕ್ತಿಯೊಬ್ಬರು ತೀವ್ರ ಅನಾರೋಗ್ಯದ ನಡುವೆಯೂ ವೆಂಟಿಲೇಟರ್​​ನೊಂದಿಗೆ ಜವಾನ್​ ಚಿತ್ರವನ್ನು ವೀಕ್ಷಿಸಲು ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವ್ಯಕ್ತಿಯ ಅಭಿಮಾನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಇದನ್ನೂ ಓದಿ: ಏಷ್ಯಾಕಪ್​ 2023; ಫೈನಲ್​ ಪಂದ್ಯಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ದೊಡ್ಡ ಆಘಾತ

    ಅನೀಸ್​​​ ಫಾರೂಕಿ ಎಂಬ ವ್ಯಕ್ತಿಯೂ ತಾನು ಹುಷಾರಿಲ್ಲದೆ ಇದ್ದರೂ ಸಹ ಬಂದು ತನ್ನ ನೆಚ್ಚಿನ ನಟನ ಚಿತ್ರವನ್ನು ವೀಕ್ಷಿಸಿದ್ದಾರೆ. ಆತನ ಜೊತೆ ವ್ಯಕ್ತಿಯೊಬ್ಬರು ವೆಂಟಿಲೇಟರ್​​ ಹಿಡಿದು ನಡೆದು ಬರುತ್ತಿರುವುದು ಕಂಡು ಬರುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಅಪಾರ ಜನಮನ್ನಣೆ ಸಿಕ್ಕಿದೆ.

    ಇತ್ತೀಚಿಗೆ 85 ವರ್ಷದ ಅಜ್ಜಿಯೊಬ್ಬರು ಶಾರುಖ್ ಖಾನ್ ನಟನೆಯ ‘ಜವಾನ್’ ಬಗ್ಗೆ ಹೇಳಿದ್ದು, ಅದಕ್ಕೆ ಸ್ವತಃ ಬಾದ್‌ಶಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts