ಹೆಂಡತಿ ಇಲ್ಲದ ಸಮಯದಲ್ಲಿ ಮಗಳನ್ನು ರೇಪ್ ಮಾಡಿ ಗರ್ಭಿಣಿ ಮಾಡಿದ... ಆಸ್ಪತ್ರೆಯಲ್ಲಿ ಬಯಲಾಯಿತು ರಹಸ್ಯ!

rape
Published on

ಅಹಮದಾಬಾದ್​ : ಗುಜರಾತ್​ನ ಭಾವ್​ನಗರ್​ ಜಿಲ್ಲೆಯಲ್ಲಿ ಪುರುಷನೊಬ್ಬ ಹೆತ್ತ ಮಗಳನ್ನೇ ಬಲಾತ್ಕಾರ ಮಾಡಿ ಗರ್ಭಿಣಿಯಾಗಿಸಿರುವ ಪ್ರಸಂಗ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ಹೋದ ಯುವತಿಯು ಮಗುವಿಗೆ ಜನ್ಮ ನೀಡಿದ ನಂತರ ತನ್ನ ತಂದೆಯ ದುಷ್ಕೃತ್ಯವನ್ನು ಹೇಳಿಕೊಂಡಿದ್ದಾಳೆ.

ಕೊಳಗೇರಿಯ ನಿವಾಸಿಯಾದ 19 ವರ್ಷದ ಯುವತಿಯು ಜೂನ್ 9 ರಂದು ಅನಾರೋಗ್ಯದಿಂದಾಗಿ ಭಾವ್​ನಗರ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಾದಳು. ವೈದ್ಯರು ಪರೀಕ್ಷಿಸಿದಾಗ ಆಕೆ ಗರ್ಭಿಣಿಯಾಗಿರುವುದು ಪತ್ತೆಯಾಗಿದ್ದು, ಗಂಡುಮಗುವಿಗೆ ಜನ್ಮ ನೀಡಿದಳು. ಮಗುವಿನ ತಂದೆ ಯಾರೆಂದು ಕೇಳಿದಾಗ ತನ್ನ ಅಪ್ಪನೇ ಅನೇಕ ಬಾರಿ ತನ್ನ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದ್ದರ ಬಗ್ಗೆ ತಿಳಿಸಿದಳು. ತಾಯಿ ಮನೆಯಲ್ಲಿಲ್ಲದಾಗ ಅಥವಾ ಅವಳು ಮಲಗಿರುವಾಗ ಮತ್ತೆ ಮತ್ತೆ ಬಲಾತ್ಕಾರ ಮಾಡಿ ಬಸಿರಾಗಿಸಿರುವುದು ತಿಳಿದುಬಂತು ಎನ್ನಲಾಗಿದೆ.

ಅತ್ಯಾಚಾರದ ಆರೋಪದಡಿ ಯುವತಿಯ ತಂದೆಯನ್ನು ಭಾವ್​ನಗರ್​ ಪೊಲೀಸರು ಬಂಧಿಸಿದ್ದಾರೆ. ಆತ ದಿನಗೂಲಿ ಕಾರ್ಮಿಕನಾಗಿದ್ದು, ಇಬ್ಬರು ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ದೊಡ್ಡ ಮಗಳು ಮತ್ತು ಗಂಡುಮಕ್ಕಳಿಗೆ ಮದುವೆಯಾಗಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಚಿಕ್ಕಮಗಳಾದ ಸಂತ್ರಸ್ತ ಯುವತಿ ಮತ್ತು ತನ್ನ ಪತ್ನಿಯೊಂದಿಗೆ ಕೊಳಗೇರಿಯಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net