ಡೇಟಿಂಗ್​ ಆ್ಯಪ್​ ಮೂಲಕ ಪುಸಲಾಯಿಸಿ ಕರೆದರು, ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್​ ಮಾಡಿದರು!

cropped-Arrested-611631070
Published on

ನವದೆಹಲಿ : ಡೇಟಿಂಗ್​ ಆ್ಯಪ್​ನ ಮೂಲಕ ಪುರುಷನೊಬ್ಬನನ್ನು ಪುಸಲಾಯಿಸಿ ಕರೆದು, ಅಶ್ಲೀಲ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ನಾಲ್ವರನ್ನು ಗ್ರೇಟರ್​ ನಾಯಿಡಾ ಪೊಲೀಸರು ಬಂಧಿಸಿದ್ದಾರೆ. ಗ್ರೈಂಡರ್​ ಎಂಬ ಸಲಿಂಗಕಾಮಿಗಳ ಡೇಟಿಂಗ್​ ಆ್ಯಪ್​ನಲ್ಲಿ ಆರೋಪಿಗಳು ನಕಲಿ ಖಾತೆಗಳನ್ನು ತೆರೆದು ಜನರಿಗೆ ವಂಚನೆ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.

ವ್ಯಕ್ತಿಯೊಬ್ಬ ಗ್ರೈಂಡರ್​ ಆ್ಯಪ್​ ಮೂಲಕ ಓರ್ವನ ಪರಿಚಯವಾದ ನಂತರ ಖಾಸಗಿ ಸ್ಥಳದಲ್ಲಿ ಭೇಟಿಯಾಗಲು ಹೋಗಿದ್ದು, ಆ ಸಮಯದಲ್ಲಿ ನಾಲ್ಕು ಜನರು ಬಂದು ಚೆನ್ನಾಗಿ ಥಳಿಸಿ, ಅಶ್ಲೀಲ ವಿಡಿಯೋ ಮಾಡಿಸಿ 2 ಲಕ್ಷ ರೂಪಾಯಿ ಕೊಡದಿದ್ದರೆ ವಿಡಿಯೋವನ್ನು ಲೀಕ್ ಮಾಡುವುದಾಗಿ ಬೆದರಿಸಿದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ 50,000 ರೂ.ಗಳನ್ನು ಯುಪಿಐ ಮೂಲಕ ಪಾವತಿಸಿದ್ದ ಸಂತ್ರಸ್ತನು, ಹೆಚ್ಚಿನ ಹಣದ ಬೇಡಿಕೆ ಇಟ್ಟಾಗ ಬೀಟಾ 2 ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದ. ತನಿಖೆ ಕೈಗೊಂಡ ಪೊಲೀಸರು, ಡಿಜಿಟಲ್​ ಸರ್ವಿಯಲೆನ್ಸ್​ ಬಳಸಿ ದುಷ್ಕರ್ಮಿಗಳ ಲೊಕೇಷನ್ ಪತ್ತೆ ಹಚ್ಚಿದ್ದು, ಗೌರವ್, ಮೋಹಿತ್, ಸಚಿನ್ ಮತ್ತು ಗೌತಮ್​ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net