ಟಿಂಡರ್​ನಲ್ಲಿ ಪರಿಚಯವಾದ ಯುವತಿಯನ್ನು ರೇಪ್​ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

rape
Published on

ಮುಂಬೈ: ಇತ್ತೀಚೆಗೆ ಟಿಂಡರ್​ ಆ್ಯಪ್​ ಯುವಜನತೆಯ ನೆಚ್ಚಿನ ಆ್ಯಪ್​ ಆಗಿ ಬದಲಾಗಿದೆ. ಇದೇ ಟಿಂಡರ್ ಆ್ಯಪ್​ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನೊಂದಿಗೆ ಡೇಟ್​ಗೆ ತೆರಳಿದ್ದ ಯುವತಿ ಅತ್ಯಾಚಾರಕ್ಕೆ ಒಳಗಾಗಿರುವ ಘಟನೆ ಮಹಾರಾಷ್ಟ್ರದ ಚಿಂಚ್​ವಾಡದಲ್ಲಿ ನಡೆದಿದೆ.

26 ವರ್ಷದ ಗಗನಸಖಿ ಡಿಸೆಂಬರ್​ 25ರಂದು ಟಿಂಡರ್​ನಲ್ಲಿ ಅಭಿಜಿತ್​ ವಾಘಾ ಹೆಸರಿನ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಳು. ಅವರಿಬ್ಬರು ಡಿಸೆಂಬರ್​ 27ರಂದು ಹೋಟೆಲ್​ ಒಂದರಲ್ಲಿ ಭೇಟಿಯಾಗುವ ನಿರ್ಧಾರ ಮಾಡಿದ್ದಾರೆ. ಅದರಂತೆ ಭೇಟಿ ಮಾಡಿ ಒಂದಿಷ್ಟು ಮಾತುಕತೆ ನಡೆಸಿದ್ದಾರೆ. ನಂತರ ಯುವತಿಗೆ ಕುಡಿಯಲು ಅಭಿಜಿತ್​ ಡ್ರಿಂಕ್ಸ್​ ತಂದುಕೊಟ್ಟಿದ್ದಾನೆ. ಕುಡಿದ ಅಮಲು ಹೆಚ್ಚಾದ ಹಿನ್ನೆಲೆಯಲ್ಲಿ ಆಕೆಗೆ ಆಟೋದಲ್ಲಿ ಮನೆಗೆ ಹೋಗಬೇಡ ನಾನೇ ನಿನ್ನ ಮನೆಗೆ ಬಿಡುತ್ತೇನೆ ಎಂದು ಹೇಳಿದ್ದಾಳೆ. ಅದರಂತೆ ಯುವತಿ ಆತನ ಬೈಕ್​ ಹತ್ತಿ ಕುಳಿತಿದ್ದಾಳೆ.

ಬೈಕ್​ ಹತ್ತಿದ ಯುವತಿಯನ್ನು ಅಭಿಜಿತ್​ ತನ್ನ ಮನೆಗೆ ಕರೆದೊಯ್ದಿದ್ದಾನೆ. ತನ್ನ ರೂಮಿಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆ ವಿರೋಧಿಸಿದ್ದಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅತ್ಯಾಚಾರ ಮಾಡಿದ ನಂತರ ಚಾಕುವಿನಿಂದ ತನಗೆ ತಾನೇ ಚುಚ್ಚಿಕೊಂಡಿದ್ದಾನೆ. ರೂಮಿನಲ್ಲಿ ಇಬ್ಬರ ನರಳಾಟ ಕೇಳಿದ ಅಭಿಜಿತ್​ ತಂದೆ ರೂಮಿಗೆ ಬಂದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾನೆ. ಇದೀಗ ಅಭಿಜಿತ್​ನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net