More

    ಮೂಗಿನ ಸರ್ಜರಿ ಮಾಡಿಸಿ, ಎರಡೂ ಕಾಲು ಕಳೆದುಕೊಂಡ ಯುವತಿ! ಚಿಕನ್​ ತಿಂದಿದ್ದೇ ಕಾರಣ ಎಂದ ಆಸ್ಪತ್ರೆ

    ಅಂಕಾರಾ: ಮೂಗನ್ನು ಸಣ್ಣ ಮಾಡಿಸಿಕೊಂಡು ಚಂದ ಕಾಣಬೇಕೆಂದು ಸರ್ಜರಿ ಮಾಡಿಸಿಕೊಂಡ ಯುವತಿಯೊಬ್ಬಳು ತನ್ನ ಎರಡೂ ಕಾಲನ್ನು ಕಳೆದುಕೊಂಡಿರುವ ಘಟನೆ ಟರ್ಕಿಯಲ್ಲಿ ನಡೆದಿದೆ. ಇದೀಗ ಯುವತಿ ಆಸ್ಪತ್ರೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ಪರಿಹಾರ ಕೊಡಿಸುವಂತೆ ಕೋರಿದ್ದಾಳೆ.

    ಇದನ್ನೂ ಓದಿ: ಮದ್ವೆಯಾದ ಎರಡೇ ವಾರಕ್ಕೆ ಯುವತಿ ಆತ್ಮಹತ್ಯೆಗೆ ಶರಣು: ಕಣ್ಣೀರು ತರಿಸುವಂತಿದೆ ತಾಯಿಗೆ ಬರೆದ ಡೆತ್​ನೋಟ್​!

    25 ವರ್ಷದ ಸೆವಿಂಕ್ ಸೆಕ್ಲಿಕ್ 2014ರ ಮೇ 2ರಂದು ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಳು. ಸ್ವಲ್ಪ ದೊಡ್ಡವಾಗಿದ್ದ ಆಕೆಯ ಮೂಗನ್ನು ಸಣ್ಣ ಮಾಡಲೆಂದು ಎರಡು ಗಂಟೆಗಳ ಕಾಲ ಸರ್ಜರಿ ಮಾಡಲಾಗಿತ್ತು. ಸರ್ಜರಿಗೆ ಒಳಗಾದ ಸೆವಿಂಕ್​ರನ್ನು ವೈದ್ಯರು ಕೆಲ ದಿನಗಳ ಬಳಿಕೆ ಡಿಸ್ಚಾರ್ಜ್​ ಮಾಡಿ ಮನಗೆ ಕಳುಹಿಸಿಕೊಟ್ಟಿದದರು. ಆದರೆ ಮನೆಗೆ ತೆರಳಿದ ಸೆವಿಂಕ್​ಗೆ ಕಾಲುಗಳಲ್ಲಿ ನೋವು ಕಾಣಿಸಿಕೊಂಡಿದೆ. ಅದನ್ನು ತೋರಿಸಲು ಆಸ್ಪತ್ರೆಗೆ ತೆರಳಿದ್ದಾಳೆ. ಸರ್ಜರಿ ಆದ ಕಾರಣ ಈ ರೀತಿ ಆಗುತ್ತದೆ, ಏನೂ ತೊಂದರೆಯಿಲ್ಲ ಎಂದು ಹೇಳಿ ವೈದ್ಯರು ವಾಪಾಸು ಕಳುಹಿಸಿದ್ದಾರೆ.

    ಕೆಲ ದಿನಗಳಲ್ಲಿ ಸೆವಿಂಕ್​ನ ಕಾಲಗಳು ಕಪ್ಪಾಗಲಾರಂಭಿಸಿವೆ. ಪೂರ್ತಿ ಕಪ್ಪಾದ ಕಾಲುಗಳಲ್ಲಿ ನಡೆಯಲಾಗದೆ ಆಕೆ ಆಸ್ಪತ್ರೆ ಸೇರಿದ್ದಾಳೆ. ಆಗ ಪರಿಶೀಲಿಸಿದ ವೈದ್ಯರು ರಕ್ತದಲ್ಲಿ ಬ್ಲಡ್​ ಪಾಯಿಸನ್​ ಆಗಿರುವ ಕಾರಣ ಈ ರೀತಿ ಆಗಿರುವುದಾಗಿ ತಿಳಿಸಿದ್ದಾರೆ. ಎರಡೂ ಕಾಲುಗಳನ್ನು ಮೊಣಕಾಲಿನ ಕೆಳಗೆ ಕತ್ತರಿಸದಿದ್ದರೆ ಆಕೆಯ ಜೀವಕ್ಕೇ ಅಪಾಯ ಎಂದು ಹೇಳಿದ್ದಾರೆ. ಅದಾದ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿ ಆಕೆಯ ಕಾಲುಗಳನ್ನು ಕತ್ತರಿಸಲಾಗಿದೆ.

    ಇದನ್ನೂ ಓದಿ: ಬಿಜೆಪಿ ಹಿರಿಯ ಸಂಸದ ರಾಜೀನಾಮೆ; ನನ್ನ ತಪ್ಪಿಂದ ಪಕ್ಷಕ್ಕೆ ತೊಂದರೆಯಾಗಬಾರದೆಂದ ಮಾಜಿ ಕೇಂದ್ರ ಸಚಿವ

    ಕಾಲುಗಳನ್ನು ಕಳೆದುಕೊಂಡಿರುವ ಸೆವಿಂಕ್​ ಇದೀಗ ಆಸ್ಪತ್ರೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. 1 ಕೋಟಿ ರೂಪಾಯಿ ಪರಿಹಾರ ಹಣ ನೀಡಬೇಕು ಎಂದು ಕೋರಿದ್ದಾಳೆ. ಆದರೆ ಯುವತಿಯ ಆರೋಪವನ್ನು ತಳ್ಳಿ ಹಾಕಿರುವ ಆಸ್ಪತ್ರೆ, ಯುವತಿ ಮೂಗಿನ ಶಸ್ತ್ರಚಿಕಿತ್ಸೆಯಾದ ಕೆಲವೇ ದಿನಗಳಲ್ಲಿ ಚಿಕನ್​ ತಿಂದ ಕಾರಣ ಈ ರೀತಿ ಸಮಸ್ಯೆಯಾಗಿತ್ತು ಎಂದು ಹೇಳಿದೆ. ಇದರ ಸಂಪೂರ್ಣ ವಿಚಾರಣೆ ಮಾಡಲು ನ್ಯಾಯಾಲಯ ಆದೇಶಿಸಿದ್ದು, ನಂತರ ತೀರ್ಪು ನೀಡುವುದಾಗಿ ತಿಳಿಸಿದೆ. (ಏಜೆನ್ಸೀಸ್​)

    ಡಾಕ್ಟರ್​ ಕನಸು ಕಟ್ಟಿದ್ದ ಯುವತಿ ಆತ್ಮಹತ್ಯೆ; ಶೇ. 96 ಅಂಕ ತೆಗೆದರೂ ಸಿಗಲಿಲ್ಲ ಸರ್ಕಾರಿ ಸೀಟು!

    ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts