More

    ಡಾಕ್ಟರ್​ ಕನಸು ಕಟ್ಟಿದ್ದ ಯುವತಿ ಆತ್ಮಹತ್ಯೆ; ಶೇ. 96 ಅಂಕ ತೆಗೆದರೂ ಸಿಗಲಿಲ್ಲ ಸರ್ಕಾರಿ ಸೀಟು!

    ಸೊರಬ: ಎಂಬಿಬಿಎಸ್ ಪದವಿ ಪಡೆದು ವೈದ್ಯೆಯಾಗುವ ಕನಸು ಈಡೇರಲಿಲ್ಲ ಎಂದು ಮನನೊಂದ ವಿದ್ಯಾರ್ಥಿನಿ ಭಾನುವಾರ ರಾತ್ರಿ ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಂದ್ರಗುತ್ತಿ ಹೋಬಳಿ ಚನ್ನಪಟ್ಟಣದ ಸಂಕಲ್ಪ ಮೃತ ದುರ್ದೈವಿ.

    ಇದನ್ನೂ ಓದಿ: ಈ ಧರ್ಮಗುರುವಿಗೆ 130 ಪತ್ನಿಯರು, 203 ಮಕ್ಕಳು: ಇವರ ಕುತೂಹಲದ ಸ್ಟೋರಿ ಇಲ್ಲಿದೆ…

    ದ್ವಿತೀಯ ಪಿಯುಸಿ (ವಿಜ್ಞಾನ) ಯಲ್ಲಿ ಪ್ರತಿಶತ 96 ಅಂಕ ಪಡೆದು ಉತ್ತೀರ್ಣಳಾಗಿದ್ದ ಸಂಕಲ್ಪ ಎಂಬಿಬಿಎಸ್ ಓದಬೇಕು ಎಂದು ಕನಸು ಕಂಡು ಎರಡು ಬಾರಿ ನೀಟ್ ಪರೀಕ್ಷೆ ಬರೆದರೂ ಸರ್ಕಾರಿ ಕೋಟಾದಲ್ಲಿ ಸೀಟು ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ಮನನೊಂದು ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದ ತನ್ನ ಕೋಣೆಯಲ್ಲೇ ನೇಣು ಬಿಗಿದುಕೊಂಡಿದ್ದಾಳೆ.

    ಸಂಕಲ್ಪಗೆ 5ನೇ ತರಗತಿಯಲ್ಲಿದ್ದಾಗ ಹೃದಯಾಘಾತವಾಗಿ ಶಸ್ತ್ರಚಿಕಿತೆಗೊಳಗಾಗಿ ಚೇತರಿಸಿಕೊಂಡಿದ್ದಳು. ಅಂದಿನಿಂದ ಡಾಕ್ಟರ್ ಆಗಬೇಕು ಎಂದು ಕನಸು ಕಟ್ಟಿಕೊಂಡಿದ್ದಳು. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ನೀಟ್​ನಲ್ಲಿ ನಿರೀಕ್ಷಿತ ಅಂಕ ಗಳಿಸಲಾಗದ ಕಾರಣ ಸರ್ಕಾರಿ ಕೋಟಾದಲ್ಲಿ ಸೀಟು ಸಿಕ್ಕಿರಲಿಲ್ಲ. ಮ್ಯಾನೇಜ್​ವೆುಂಟ್ ಕೋಟಾದಲ್ಲಿ ಎಂಬಿಬಿಎಸ್​ಗೆ ಪ್ರವೇಶ ಪಡೆಯಲು ಲಕ್ಷಾಂತರ ರೂ. ಹಣ ಬೇಕು, ನಮಗೆ ಇದು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಳು. ಅದರೆ ಮನೆಯವರು ಬಿಎಎಂಎಸ್ ಮಾಡಿದರಾಯಿತು ಎಂದು ಹೇಳಿದರೂ ಆಕೆ ಒಪ್ಪುತ್ತಿರಲಿಲ್ಲ.

    ಇದನ್ನೂ ಓದಿ: ಗಣ್ಯ ವ್ಯಕ್ತಿಯೊಂದಿಗೆ ಡ್ಯಾನ್ಸರ್​ ಲವ್ವಿ ಡವ್ವಿ! ಕೆಲವೇ ದಿನಗಳಲ್ಲಿ ನಡುರಸ್ತೆಯಲ್ಲಿ ಹೆಣವಾದ ಡ್ಯಾನ್ಸರ್​!

    ಸಂಕಲ್ಪ ಅವರ ತಂದೆ, ತಾಯಿ ಇಬ್ಬರು ಗ್ರಾಪಂ ಮಾಜಿ ಅಧ್ಯಕ್ಷರು. ತಂದೆ ಈಶ್ವರಪ್ಪ ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಪದಾಧಿಕಾರಿಯಾಗಿದ್ದಾರೆ. ಸಂಕಲ್ಪಗೆ ಓರ್ವ ತಮ್ಮನಿದ್ದಾನೆ. ಮೃತಳ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮದಲ್ಲಿ ನೆರವೇರಿತು. ಶಾಸಕ ಕುಮಾರ್ ಬಂಗಾರಪ್ಪ, ಬಿಜೆಪಿ ಮುಖಂಡ ಎಸ್.ಎನ್.ಚನ್ನಬಸಪ್ಪ ಸೇರಿ ತಾಲೂಕಿನ ವಿವಿಧ ಬಿಜೆಪಿ ಮುಖಂಡರು ಮೃತಳ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

    ಭಾವಿ ಪತಿಗೆ ಮಲಗಲು ತನ್ನ ಮನೆಯಲ್ಲೇ ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್​!

    2021 ಇನ್ನೂ ಭೀಕರವಾಗಿರುತ್ತೆ! ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ ಭವಿಷ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts