More

    ಈ ಧರ್ಮಗುರುವಿಗೆ 130 ಪತ್ನಿಯರು, 203 ಮಕ್ಕಳು: ಇವರ ಕುತೂಹಲದ ಸ್ಟೋರಿ ಇಲ್ಲಿದೆ…

    ನೈಜೇರಿಯಾ: ಜೀರಿಯಾದ ಪ್ಲೇಬಾಯ್​ ಎಂದೇ ಪ್ರಸಿದ್ಧವಾಗಿರುವ ಪ್ರೆಟ್ಟಿ ಮೈಕ್ ಒಂದೇ ಸಲಕ್ಕೆ ತನ್ನ ಆರು ಪತ್ನಿಯನ್ನು ಗರ್ಭವತಿ ಮಾಡಿ ಸುದ್ದಿಯಾಗಿದ್ದರು. ಇದೀಗ ಇದೇ ದೇಶದ ಮುಸ್ಲಿಂ ಧರ್ಮಗುರು ಅವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸುದ್ದಿಯಾಗಿದ್ದಾರೆ.

    ಅದೂ ಅವರು ಈಚೆಗೆ ಮೃತಪಟ್ಟ ನಂತರ ಈ ಸುದ್ದಿ ಬಹಿರಂಗಗೊಂಡಿದೆ. ಮೊಹಮ್ಮದ್ ಬೆಲ್ಲೊ ಅಬೂಬಕರ್ ಎಂಬ ಈ ಧರ್ಮಗುರು ಅಗಲಿರುವುದು 130 ಹೆಂಡತಿಯರನ್ನು ಹಾಗೂ 203 ಮಕ್ಕಳನ್ನು! ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದ ಮೊಹಮ್ಮದ್​ ಅವರ ಸುದ್ದಿಯೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವಿಚಿತ್ರ ಕಾಯಿಲೆಯೊಂದರಿಂದ ಇವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಆದರೆ ಅಚ್ಚರಿಯ ವಿಷಯವೆಂದರೆ ಈ 130 ಪತ್ನಿಯರಲ್ಲಿ ಈಗ ಕೆಲವರು ಗರ್ಭವತಿಯರಾಗಿದ್ದಾರಂತೆ!

    ಈ ಧರ್ಮಗುರುವಿಗೆ 130 ಪತ್ನಿಯರು, 203 ಮಕ್ಕಳು: ಇವರ ಕುತೂಹಲದ ಸ್ಟೋರಿ ಇಲ್ಲಿದೆ...
    2008ರಲ್ಲಿ ಇವರ ಮದುವೆಯ ವಿಷಯ ಇತರ ಧರ್ಮಗುರುಗಳನ್ನು ಗರಂ ಆಗಿಸಿದ್ದವು. ಇಸ್ಲಾಂ ಧರ್ಮದಲ್ಲಿ ನಾಲ್ವರು ಪತ್ನಿಯರಿಗೆ ಮಾತ್ರ ಅವಕಾಶ ಇರುವ ಕಾರಣ, ತಮ್ಮ ಕಾನೂನಿನ ಅನ್ವಯ ಆಗ ಇದ್ದ 86 ಪತ್ನಿಯರಲ್ಲಿ 82 ಮಂದಿಗೆ ವಿಚ್ಛೇದನ ನೀಡಬೇಕು ಎಂದು ಆದೇಶ ಹೊರಡಿಸಿದ್ದರು. ಇದಕ್ಕಾಗಿ ಮೊಹಮ್ಮದ್​ ಬೆಲ್ಲೊ ಅಬೂಬಕರ್​ ಅವರಿಗೆ 48 ಗಂಟೆ ಗಡುವು ನೀಡಲಾಗಿತ್ತು.

    ಆದರೆ ಇದಕ್ಕೆ ಈ ಗುರು ಸುತರಾಂ ಒಪ್ಪಲಿಲ್ಲ. ಮದುವೆ ಎನ್ನುವುದು ನನಗೆ ದೈವಿಕ ಉದ್ದೇಶವಾಗಿದ್ದು, ಈ ಆದೇಶ ಪಾಲನೆ ಸಾಧ್ಯವೇ ಇಲ್ಲ ಎಂದರು. ಅಷ್ಟೇ ಅಲ್ಲದೇ ಇದು ನನಗೆ ಅಲ್ಹಾ ನೀಡಿರುವ ವರದಾನ. ಒಬ್ಬ ವ್ಯಕ್ತಿ ಅಬ್ಬಬ್ಬಾ ಎಂದರೆ 10 ಮಂದಿಯನ್ನು ಕಟ್ಟಿಕೊಳ್ಳಬಲ್ಲ. ಆದರೆ ನನಗೆ ಇಷ್ಟು ಪತ್ನಿಯರು ಇದ್ದರೂ ನಾನು ಇಷ್ಟೆಲ್ಲಾ ಶಕ್ತಿವಂತನಾಗಿದ್ದೇನೆ ಎಂದರೆ ಅದು ಅಲ್ಹಾನ ದಯೆ. ಆದ್ದರಿಂದ ವಿಚ್ಛೇದನ ನೀಡಲಾರೆ ಎಂದರು.
    ಈ ಧರ್ಮಗುರುವಿಗೆ 130 ಪತ್ನಿಯರು, 203 ಮಕ್ಕಳು: ಇವರ ಕುತೂಹಲದ ಸ್ಟೋರಿ ಇಲ್ಲಿದೆ...

    ಅಲ್ಲಿಂದ ಮತ್ತೆ ತಮ್ಮ ಮದುವೆಯಾಗುವ ಹಾಗೂ ಮಕ್ಕಳು ಮಾಡುವ ಕಾರ್ಯವನ್ನು ಮುಂದುವರೆಸಿದರು. ಅಷ್ಟಕ್ಕೂ ನಾನಾಗಿಯೇ ಯಾರ ಹಿಂದೆಯೂ ಬೀಳಲಿಲ್ಲ. ಈ ಎಲ್ಲಾ ಹೆಣ್ಣುಮಕ್ಕಳು ತಾವಾಗಿಯೇ ನನ್ನ ಬಳಿ ಬಂದವರು.

    ಅದರಲ್ಲಿ ಕೆಲವು ಪತ್ನಿಯನ್ನು ಮಾತನಾಡಿಸಿದಾಗ ನನಗೆ ಅಲ್ಹಾನಿಂದ ಸಂದೇಶ ಬಂದಿತ್ತು. ಇವರನ್ನೇ ಮದುವೆಯಾಗುವಂತೆ ಹೇಳಲಾಗಿತ್ತು. ಆದ್ದರಿಂದ ಮದುವೆಯಾಗಿದ್ದೆವು ಎಂದಿದ್ದಾರೆ. ಎಲ್ಲರೂ ತುಂಬಾ ಸಂತೋಷದಿಂದ ಇದ್ದು, ಇವರೊಬ್ಬ ಒಳ್ಳೆಯ, ಉತ್ತಮ ಗಂಡ ಎಂದಿದ್ದಾರೆ.
    ಇವರ ಅಂತ್ಯಕ್ರಿಯೆ ಮೊನ್ನೆ ಭಾನುವಾರ ನಡೆದಿದ್ದು, ಎಲ್ಲ ಪತ್ನಿಯರೂ ಹಾಗೂ ಮಕ್ಕಳು ಅದರಲ್ಲಿ ಇದ್ದುದು ವಿಶೇಷವಾಗಿತ್ತು.

    ಕೇಂದ್ರ ಸರ್ಕಾರದ ಉದ್ಯೋಗ ಬಯಸಿದವರಿಗೆ ಇಲ್ಲಿವೆ ವಿವಿಧ ಹುದ್ದೆಗಳು

    ಅಧಿವೇಶನವಿದ್ದಾಗ ಅಮೆರಿಕ, ಉಸಿರಾಟಕ್ಕೆ ಗೋವಾ, ಸ್ಥಾಪನಾ ದಿನವಿದ್ದಾಗ ಇಟಲಿ… ಜಾಲತಾಣದ ತುಂಬ​ 9 2 11

    ನಿಗದಿಯಂತೆ ಜ.1ರಂದು ಶಾಲಾ-ಕಾಲೇಜು ಆರಂಭವಾಗತ್ತಾ? ಸಂದೇಹಗಳಿಗೆ ತೆರೆ ಎಳೆದ ಸಿಎಂ…

    ನಮಗಾಗಿ ಅಪ್ಪ ಒಮ್ಮೆಯೂ ​ರಜೆ ಹಾಕಲ್ಲ, ಕೇಳಿದ್ದನ್ನು ಕೊಟ್ರೆ ಸಾಕೆ? ತಂದೆ ಪ್ರೀತಿ ಬಯಸೋದೇ ತಪ್ಪಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts