More

    ನಿಗದಿಯಂತೆ ಜ.1ರಂದು ಶಾಲಾ-ಕಾಲೇಜು ಆರಂಭವಾಗತ್ತಾ? ಸಂದೇಹಗಳಿಗೆ ತೆರೆ ಎಳೆದ ಸಿಎಂ…

    ಬೆಂಗಳೂರು: ಇದಾಗಲೇ ಕೋವಿಡ್​ ಹೊಸ ರೂಪದೊಂದಿಗೆ ಬ್ರಿಟನ್​ನಿಂದ ಕಾಲಿಟ್ಟಾಗಿದೆ. ಕಳೆದ ವರ್ಷದಿಂದ ಆರಂಭಗೊಂಡ ಕರೊನಾ ಸೋಂಕಿನ ಮಾರಿ ಇನ್ನೂ ತಗ್ಗಿಲ್ಲ. ಇದರ ನಡುವೆಯೇ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಆರಂಭ ಮಾಡಲಾಗುತ್ತದೆ ಎಂದು ಈಚೆಗಷ್ಟೇ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಪ್ರಕಟಿಸಿದ್ದರು.

    ಆದರೆ ಹೊಸ ರೂಪದ ಕೋವಿಡ್​ನಿಂದಾಗಿ ಮತ್ತೆ ಭಯದ ವಾತಾವರಣ ಸೃಷ್ಟಿಯಾಗಿರುವ ಕಾರಣ, ಶಾಲಾ-ಕಾಲೇಜು ಆರಂಭ ಮಾಡುವುದು ದೌಟು ಎಂದೇ ಬಹುತೇಕ ಮಂದಿ ಭಾವಿಸಿದ್ದರು. ಇದರ ಬಗ್ಗೆ ಇನ್ನಿಲ್ಲದಷ್ಟು ಗೊಂದಲ ಸೃಷ್ಟಿಯಾಗುತ್ತಲೇ ಇದೆ.

    ಇಂದು ಈ ಬಗ್ಗೆ ಸ್ಪಷ್ಟಪಡಿಸಿರುವ ಮುಖ್ಯಮಂತ್ರಿಗಳು, ಹಿಂದಿನ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ನಿಗದಿಯಂತೆಯೇ ಜನವರಿ 1ರಿಂದ 10 ಮತ್ತು 12ನೇ ತರಗತಿಗಳನ್ನು ಆರಂಭ ಮಾಡಲಾಗುತ್ತದೆ ಎಂದು ಗೊಂದಲಕ್ಕೆ ತೆರೆ ಎಳೆದಿದ್ದಾರೆ.

    ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದ ಯಡಿಯೂರಪ್ಪ, ಚರ್ಚೆ ಬಳಿಕ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು. ಶಾಲೆ ಆರಂಭದ ವಿಷಯದಲ್ಲಿ ಸರ್ಕಾರದ ಕಡೆಯಿಂದ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

    ಮುಂಜಾಗ್ರತಾ ಕ್ರಮಗಳೊಂದಿಗೆ ಆರಂಭಿಸಲು ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ಶಾಲೆ ಮತ್ತು ಕಾಲೇಜುಗಳ ಪ್ರಾರಂಭ ಮಾಡಲಾಗುವುದು. ಕರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಲ್ಲಾ ಶಾಲಾ-ಕಾಲೇಜುಗಳಿಗೆ ಹೇಳಲಾಗಿದೆ. ಎಲ್ಲಾ ನಿಯಮಗಳೂ ಪಾಲನೆಯಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

    ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಜತೆ ಸೇರಿ ಕೆಲಸ ಮಾಡಿ. ಶಾಲಾ-ಕಾಲೇಜು ಪ್ರಾರಂಭದಲ್ಲಿ ಸಮಸ್ಯೆಯಾಗಬಾರದು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ಬಗ್ಗೆ ನಿಗಾವಹಿಸಿ ಎಂದು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಬಿಎಸ್‌ವೈ ಅಧಿಕಾರಿಗಳು, ಸಚಿವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

    ಕೇಂದ್ರಕ್ಕಿರುವುದು ಇನ್ನೊಂದೇ ತಿಂಗಳ ಗಡುವು: ಇಲ್ಲದಿದ್ದರೆ ಇದೇ ನನ್ನ ಕೊನೆಯ ಉಪವಾಸ ಸತ್ಯಾಗ್ರಹ

    ಬೆಳಗಾವಿ, ಬೆಂಗಳೂರಿನ ಮೇಲೆ ಬಿದ್ದಿದೆ ಓವೈಸಿ ಕಣ್ಣು: ಅಧಿಪತ್ಯ ಸಾಧಿಸಲು ‘ಮಾಜಿ’ಗಳ ಭೇಟಿ

    ಸ್ಥಾಪನಾ ದಿನ ಇದ್ರೇನಂತೆ? ಅಜ್ಜಿ ನೋಡೋಕೆ ಹೋಗಿರ್ಬೋದು… ಎಲ್ಲಾದಕ್ಕೂ ಕಾರಣ ಕೊಡೋಕಾಗತ್ತಾ?

    ನಮಗಾಗಿ ಅಪ್ಪ ಒಮ್ಮೆಯೂ ​ರಜೆ ಹಾಕಲ್ಲ, ಕೇಳಿದ್ದನ್ನು ಕೊಟ್ರೆ ಸಾಕೆ? ತಂದೆ ಪ್ರೀತಿ ಬಯಸೋದೇ ತಪ್ಪಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts