More

    ಅಧಿವೇಶನವಿದ್ದಾಗ ಅಮೆರಿಕ, ಉಸಿರಾಟಕ್ಕೆ ಗೋವಾ, ಸ್ಥಾಪನಾ ದಿನವಿದ್ದಾಗ ಇಟಲಿ… ಜಾಲತಾಣದ ತುಂಬ​ 9 2 11

    ನವದೆಹಲಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ತನ್ನ 136ನೇ ಸ್ಥಾಪನಾ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸದ್ದಿಲ್ಲದೇ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಇಟಲಿಗೆ ಪ್ರಯಾಣ ಮಾಡಿರುವುದು ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಇಟಲಿಯಲ್ಲಿ ಕರೊನಾ ಲಸಿಕೆ ಹಾಕುತ್ತಿರುವ ಕಾರಣ, ಲಸಿಕೆಯನ್ನು ಹಾಕಿಸಿಕೊಳ್ಳಲು ಹೋದರೋ, ಹೊಸ ವರ್ಷಾಚರಣೆಗಾಗಿ ಹೋದರೋ ಅಥವಾ ಪಕ್ಷದ ಅಧ್ಯಕ್ಷರಾಗಲು ಇಷ್ಟವಿಲ್ಲದೆ ಹೋದರೋ ಎಂದೆಲ್ಲಾ ಪ್ರಶ್ನೆಗಳು ಉದ್ಭವಿಸುತ್ತಿವೆ.

    ಹಿಂದೊಮ್ಮೆ ಅಧಿವೇಶನ ನಡೆಯುತ್ತಿದ್ದಾಗಲೇ ಚಿಕಿತ್ಸೆಯ ನೆಪವೊಡ್ಡಿ ತಾಯಿ-ಮಗ ಇಬ್ಬರೂ ಅಮೆರಿಕಕ್ಕೆ ಹಾರಿದ್ದರು. ಅಲ್ಲಿಂದ ಬಂದು ದೆಹಲಿಯಲ್ಲಿ ವಾಯುಮಾಲಿನ್ಯವಾಗಿದೆ ಎಂಬ ಕಾರಣ ಹೇಳಿ ಗೋವಾಕ್ಕೆ ತೆರಳಿದ್ದರು. ಇದೀಗ ಸ್ಥಾಪನಾ ದಿನದ ಸಮಯದಲ್ಲಿಯೇ ಅದೂ ತಮ್ಮ ಪಕ್ಷದ ಇಂಥದ್ದೊಂದು ಮಹತ್ವದ ದಿನಕ್ಕೆ ಭಾಗಿಯಾಗದೇ ಇಟಲಿಗೆ ತೆರಳಿರುವುದರಿಂದ ವಿಪಕ್ಷಗಳ ಬಾಯಲ್ಲಿ ರಾಹುಲ್​ ಗಾಂಧಿಯವರು ಆಹಾರವಾಗಿದ್ದಾರೆ.

    ಆದರೆ ರಾಹುಲ್​ ಗಾಂಧಿಯವರು ತಮ್ಮ ಪಕ್ಷದವರಿಗೂ ಹೇಳದೇ ಹೋಗಿರುವುದರಿಂದ ಪಕ್ಷದವರೂ ಪೇಚಿಗೆ ಸಿಲುಕಿದ್ದಾರೆ. ಕತಾರ್ ಏರ್​ಲೈನ್ಸ್ ಮೂಲಕ ಇಟಲಿಯ ಮಿಲಾನ್​ಗೆ ತೆರಳಿರುವ ರಾಹುಲ್​ ಗಾಂಧಿಯವರದ್ದೇ ಇದೀಗ ಎಲ್ಲರ ಬಾಯಲ್ಲೂ ಮಾತು. ಇತ್ತ ರೈತರ ಪ್ರತಿಭಟನೆ ಸಮಯದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಾ ರೈತರ ಪರವಾಗಿ ನಾನಿದ್ದೇನೆ ಎಂದು ಘೋಷಿಸುತ್ತಲೇ ಬಂದಿರುವ ಈ ಕಾಂಗ್ರೆಸ್​ ಧುರೀಣ, ಏಕಾಏಕಿ ಕಣ್ಮರೆಯಾಗಿದ್ದು ಏಕೆ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.

    ಈ ನಡುವೆಯೇ, ಸಾಮಾಜಿಕ ಜಾಲತಾಣದಲ್ಲಿ 9 2 11 (ನೌ ದೋ ಗ್ಯಾರಾ) ಭಾರಿ ವೈರಲ್​ ಆಗುತ್ತಿದೆ. ಇದಕ್ಕೆ ಕಾರಣ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್.

    ಚೌಹಾಣ್​ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ರಾಹುಲ್​ ಗಾಂಧಿಯವರ ವಿದೇಶ ಪ್ರವಾಸವನ್ನು ಲೇವಡಿ ಮಾಡಿದ್ದಾರೆ. “ಕಾಂಗ್ರೆಸ್ ತನ್ನ 136 ನೇ ಪ್ರತಿಷ್ಠಾನ ದಿನವನ್ನು ಇಲ್ಲಿ ಆಚರಿಸುತ್ತಿದೆ ಮತ್ತು ರಾಹುಲ್ ಗಾಂಧಿ ಮಾತ್ರ 9 2 11 ಆಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಇದನ್ನೇ ಸಹಸ್ರಾರು ಮಂದಿ ರೀ ಟ್ವೀಟ್​ ಮಾಡಿದ್ದು, 9 2 11 ಇದೀಗ ರಾಹುಲ್​ ಗಾಂಧಿಯವರನ್ನು 9 2 11 ಎಂದೇ ಕರೆಯಲಾಗುತ್ತಿದೆ.
    ಅಷ್ಟಕ್ಕೂ ನೌ ದೋ ಗ್ಯಾರಾ ಎಂದರೆ, ಓಡಿ ಹೋಗುವುದು ಎಂದು ಅರ್ಥ 1957ರಲ್ಲಿ ದೇವಾನಂದ್​ ನಿರ್ಮಿಸಿದ್ದ ತುಂಬಾ ಪ್ರಸಿದ್ಧಿ ಪಡೆದು, ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಚಲನಚಿತ್ರವಿದು. ಈ ಚಿತ್ರದ ಜತೆಯಲ್ಲಿಯೇ 9 2 11 ಎನ್ನುವುದಕ್ಕೆ ಪರಾರಿಯಾಗುವುದು, ತಪ್ಪಿಸಿಕೊಳ್ಳುವುದು, ಓಡಿಹೋಗುವುದು ಎಂಬ ಅರ್ಥ ಬಂದಿದ್ದು, ಹಿಂದಿಯಲ್ಲಿ ಇದನ್ನೇ ಬಳಸುವುದು ರೂಢಿಯಾಗಿದೆ.

    ರಾಹುಲ್​ ಗಾಂಧಿಯವರು ಪದೇ ಪದೇ ಮಹತ್ವದ ಸಂದರ್ಭಗಳಲ್ಲಿ ಹೀಗೆ ಓಡಿಹೋಗುತ್ತಾರೆ ಎಂಬ ಅರ್ಥ ಬರುವ ಟ್ವೀಟ್​ ಚೌಹಾಣ್​ ಮಾಡಿದ್ದಾರೆ.

    ಸ್ಥಾಪನಾ ದಿನ ಇದ್ರೇನಂತೆ? ಅಜ್ಜಿ ನೋಡೋಕೆ ಹೋಗಿರ್ಬೋದು… ಎಲ್ಲಾದಕ್ಕೂ ಕಾರಣ ಕೊಡೋಕಾಗತ್ತಾ?

    2000 ವರ್ಷಗಳ ಹಿಂದೆಯೇ ಇತ್ತು ಫಾಸ್ಟ್​ಫುಡ್ ಮಳಿಗೆ​: ಇದು ಪತ್ತೆಯಾದದ್ದೇ ರೋಚಕ

    ಈ ಪತ್ರವನ್ನು ಗುಟ್ಟಾಗಿ ಬರೆಯುತ್ತಿದ್ದೇನೆ. ಈ ನತದೃಷ್ಟೆಗೆ ದಯವಿಟ್ಟು ನೆರವಾಗಿ ಮೇಡಂ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts