ಪ್ರವಾಸಿ ಮಹಿಳೆಯನ್ನೇ ರೇಪ್​ ಮಾಡಿದ ಆಟೋ ಡ್ರೈವರ್​! ಪ್ರಕರಣ ದಾಖಲಾಗಿ 12 ಗಂಟೆಗಳಲ್ಲೇ ಆರೋಪಿ ಸೆರೆ

rape on napali
Published on

ಮುಂಬೈ: ಹೊರ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಮಹಿಳೆಯನ್ನು ಆಟೋ ಡ್ರೈವರ್​ ಒಬ್ಬ ರೇಪ್​ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಅತ್ಯಾಚಾರ ಪ್ರಕರಣ ದಾಖಲಾಗಿ 12 ಗಂಟೆಗಳಲ್ಲೇ ಆರೋಪಿಯನ್ನು ಸೆರೆ ಹಿಡಿಯಲಾಗಿದೆ.

ಚತ್ತೀಸಗಢದ ಜಾಶ್​ಪುರ ನಿವಾಸಿಯಾಗಿರುವ ಮಹಿಳೆ ಮುಂಬೈನಲ್ಲಿ ಕ್ರಿಸ್​ಮಸ್​ ಆಚರಿಸುವ ಸಲುವಾಗಿ ಬಂದಿದ್ದರು. ಡಿಸೆಂಬರ್​ 26ನೇ ತಾರೀಖಿನಂದು ಪನ್ವೆಲ್ ರೈಲ್ವೆ ನಿಲ್ದಾಣಕ್ಕೆ ತೆರಳಿದ ಮಹಿಳೆ ಅಲ್ಲೊಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿ ಆ ದಿನ ಆತನೊಂದಿಗೆ ಕಳೆದಿದ್ದಾಳೆ. ಮಾರನೇ ದಿನ ಬೆಳಗ್ಗೆ ಆಟೋ ಒಂದನ್ನು ಬುಕ್​ ಮಾಡಿ ಅದರಲ್ಲಿ ಗಾಂಧಿ ಗಾರ್ಡೆನ್​ಗೆ ಹೊರಟಿದ್ದಾಳೆ.

ಒಂಟಿ ಮಹಿಳೆಯನ್ನು ಆಟೋದಲ್ಲಿ ಹತ್ತಿಸಿಕೊಂಡ ಆಟೋ ಡ್ರೈವರ್​ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಈ ವಿಚಾರವಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಮುಂಬೈ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಸೆರೆ ಹಿಡಿದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net