

ನವದೆಹಲಿ: ಸುಮಾರು 50 ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಹಲವಾರು ಜನರ ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳನ್ನು ಸೃಷ್ಟಿಸಿ ನೆಟ್ಟಿಗರನ್ನು ವಂಚಿಸುತ್ತಿದ್ದ ಸೈಬರ್ ಕ್ರಿಮಿನಲ್ ಒಬ್ಬನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಲ್ಲಿ ಅಡಗಿಕೊಂಡು ಸೈಬರ್ ರಾಕೆಟ್ ನಡೆಸುತ್ತಿದ್ದ 24 ವರ್ಷದ ಯೋಗೇಶ್ ಕುಮಾರ್ ಅಲಿಯಾಸ್ ರಾಮಕುಮಾರ್ ಅನ್ನು ಗುಜರಾತಿನ ವಡೋದರ ಜಿಲ್ಲಾ ಅಪರಾಧ ವಿಭಾಗದ ಪೊಲೀಸ್ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಐಪಿಸಿ ಮತ್ತು ಐಟಿ ಕಾಯ್ದೆಯಡಿ ಕೇಸು ದಾಖಲಿಸಿರುವುದಾಗಿ ವಡೋದರ ಪೊಲೀಸ್ ಕಮಿಷನರ್ ಶಮಶೇರ್ ಸಿಂಗ್ ಹೇಳಿದ್ದಾರೆ.
ಆರೋಪಿಯು ಜನಪ್ರಿಯ ಸಾರ್ವಜನಿಕ ವ್ಯಕ್ತಿಗಳ ಸೋಷಿಯಲ್ ಮೀಡಿಯಾ ಪ್ರೊಫೈಲ್ಗಳನ್ನು ಹ್ಯಾಕ್ ಮಾಡಿ, ಅವರ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿದ್ದ. ಅವರ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ, ಅವರನ್ನು ಫಾಲೋ ಮಾಡುತ್ತಿದ್ದ ಜನರಿಂದ ಆರ್ಥಿಕ ಸಹಾಯ ಕೇಳುತ್ತಿದ್ದ. ನಂತರ ಬ್ಯಾಂಕ್ ಅಕೌಂಟ್ ಅಥವಾ ಫೋನ್ ಪೇಮೆಂಟ್ ಆ್ಯಪ್ ಮೂಲಕ ಹಣ ವರ್ಗಾಯಿಸುವಂತೆ ಮಾಡುತ್ತಿದ್ದ ಎನ್ನಲಾಗಿದೆ.(ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ