ಹೆಂಡ್ತಿ, ಮಕ್ಕಳು ಸೇರಿದಂತೆ 16 ಮಂದಿಯನ್ನು ಕಳೆದುಕೊಂಡು ಒಂಟಿಯಾದ! ತನ್ನವರಿಗಾಗಿ ಹುಡುಕಾಡುತ್ತಿರುವ ದೃಶ್ಯ ಮನಕಲಕುತ್ತದೆ..

Man loses 16 family members in Wayanad landslides
Published on

ಕೇರಳ: ವಯನಾಡಿನಲ್ಲಿ ನಡೆದ ಭೂಕುಸಿತದಿಂದಾಗಿ ಹೃದಯವಿದ್ರಾವಕ ಸುದ್ದಿ ಹೊರಬೀಳುತ್ತಿದೆ. ಇಡೀ ಕೇರಳವೇ ಈ ದುರಂತವನ್ನು ಒಟ್ಟಾಗಿ ಎದುರಿಸುತ್ತಿದೆ. ವಯನಾಡ್ ಸಂತ್ರಸ್ತರಿಗೆ ಸಹಾಯ ಮಾಡಲು ಅನೇಕ ಜನರು ಬರುತ್ತಿದ್ದಾರೆ.

ಜುಲೈ 30 ರಂದು ಭಾರೀ ಮಳೆಯಿಂದ ಉಂಟಾದ ಭೂಕುಸಿದದಿಂದಾಗಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರು ಕುಟುಂಬಸ್ಥರು, ಮನೆ ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿ ನಿಂತಿದ್ದಾರೆ. ಆದರೆ ಇಲ್ಲೊಬ್ಬ ತನ್ನ ಕುಟುಂಬದ 16 ಮಂದಿಯನ್ನು ಕಳೆದುಕೊಂಟು ಒಂಟಿಯಾಗಿ ನಿಂತಿದ್ದಾನೆ. ಈತ ಹೇಳುವುದನ್ನು ಕೇಳಿದ್ರೆ ಖಂಡಿತವಾಗಿಯೂ ಕಣ್ಣೀರು ಬರುತ್ತದೆ.

ಚುರಲ್ಮಲಾದ 42 ವರ್ಷದ ಮನ್ಸೂರ್ ಅವರು ಈ ಭೂಕುಸಿತಕ್ಕೆ ಸಿಲುಕಿ ತಾಯಿ, ಹೆಂಡತಿ, ಇಬ್ಬರು ಮಕ್ಕಳು, ಸಹೋದರಿ, ಅತ್ತಿಗೆ ಹಾಗೂ ಅವರ ಕುಟುಂಬದ 16 ಮಂದಿ ಸದಸ್ಯರನ್ನು ಕಳೆದುಕೊಂಡ ಮನ್ಸೂರ್​ ಒಬ್ಬಂಟಿಯಾಗಿ ಬದುಕುಳಿದಿದ್ದಾರೆ. 16 ಮಂದಿ ಕುಟುಂಬಸ್ಥರಲ್ಲಿ ನಾಲ್ವರ ಮೃತದೇಹ ಮಾತ್ರ ಪತ್ತೆಯಾಗಿದೆ.

ಮನ್ಸೂರ್​ ಮಾತನಾಡಿ, ನನಗೆ ನಾಲ್ಕು ಶವಗಳು ಸಿಕ್ಕಿವೆ. ನನ್ನ ಹೆಂಡತಿ, ಮಗ, ಸಹೋದರಿ ಮತ್ತು ತಾಯಿ ಮೃತದೇಹ ಪತ್ತೆಯಾಗಿದೆ. ಮಗಳ ಮೃತದೇಹವಿನ್ನೂ ಸಿಕ್ಕಿಲ್ಲ. ನಾನು ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ ಭೂಕುಸಿತವಾಗಿದೆ. ಸದ್ಯ ನನ್ನ ಬಳಿ ಏನೂ ಉಳಿದಿಲ್ಲ. ನಾನು ನನ್ನ ಸಹೋದರನ ಜತೆಗೆ ಇದ್ದೇನೆ’ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ವಯನಾಡು ಭೂಕುಸಿತ ಸಂಭವಿಸಿ ಇಂದಿಗೆ 8 ದಿನಗಳು. ಅನೇಕರು ತಮ್ಮ ಕುಟುಂಬಗಳಿಗಾಗಿ ಈ ಜಾಗದಲ್ಲಿ ಹುಡುಕಾಡುತ್ತಿದ್ದಾರೆ. ಈಗಾಗಲೇ ಭೂಕುಸಿತದಲ್ಲಿ 360ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕೆಲವು ಮೃತದೇಹಗಳು ಪತ್ತೆಯಾಗಿವೆ, ಕೆಲವು ಶವಗಳು ಗರುತೆ ಸಿಗದೆ ಹಾಗೆ ಆಗಿವೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net