ಹೆಂಡತಿ ಮೇಲೇ ಅನುಮಾನ; ಕತ್ತು ಕೊಯ್ದು ಕೊಲೆ ಮಾಡಿದ ಪತಿರಾಯ!

bangalore crime
Published on

ಬೆಂಗಳೂರು: ಹೆಂಡತಿ ಅಕ್ರಮ ಸಂಬಂಧ ಹೊಂದಿರಬಹುದು ಎನ್ನುವ ಅನುಮಾನದಿಂದಾಗಿ ಗಂಡ, ಆಕೆಯ ಕತ್ತನ್ನೇ ಕೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ಮಣಿ (36) ಬೆಂಗಳೂರಿನ ಅರಕೆರೆ ಬಳಿಯ ಬಿಟಿಎಸ್ ಲೇಔಟ್ ಮಾಸವಿದ್ದ. ಹೆಂಡತಿ ಆಶಾ (32) ಜತೆ ಸೇರಿಕೊಂಡು ಪ್ರತಿನಿತ್ಯ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಆತನಿಗೆ ಇತ್ತೀಚೆಗೆ ಹೆಂಡತಿಯ ಮೇಲೆ ಅನುಮಾನ ಶುರುವಾಗಿದೆ. ಆಕೆ ಅಕ್ರಮ ಸಂಬಂಧ ಹೊಂದಿರುಬಹುದು ಎಂದು ಅನುಮಾನ ಬೆಳೆಸಿಕೊಂಡು ಹೋಗಿದ್ದಾನೆ. ಅದೇ ಶಂಕೆಯಿಂದಾಗಿ ಮಂಗಳವಾರ ಬೆಳಗ್ಗಿನ ಜಾವ ಆಕೆಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ.

ಮಣಿ ವಿಪರೀತವಾಗಿ ಕುಡಿತದ ವ್ಯಸನಿ ಆಗಿದ್ದಾಗಿ ಹೇಳಲಾಗಿದೆ. ಹುಳಿಮಾವು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net