Instagram Reels Comment ವಿಚಾರವಾಗಿ ಪತ್ನಿಯ ಕತ್ತು ಸೀಳಿ ಕೊಂದ ಪತಿ; ಮೂವರು ಹೆಣ್ಣುಮಕ್ಕಳು ಹೇಳಿದ್ದಿಷ್ಟು

Crime Scene

ಮೀರತ್​: ಇತ್ತೀಚಿನ ದಿನಗಳಲ್ಲಿ ರೀಲ್ಸ್​ (Reels) ಹುಚ್ಚಾಟ್ಟಕ್ಕೆ ಜನರು ಬಲಿಯಾಗುತ್ತಿದ್ದು, ಈ ವಿಚಾರ ಚರ್ಚಾಸ್ಪದವಾಗಿದೆ. ಇದೀಗ ರೀಲ್ಸ್​ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವ ತನ್ನ ಮೂವರು ಹೆಣ್ಣು ಮಕ್ಕಳು ಮುಂದೆಯೇ ಪತ್ನಿಯ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಮೀರತ್​ನಲ್ಲಿ ನಡೆದಿದೆ.

ಮೃತರನ್ನು ಸೀಮಾ ಎಂದು ಗುರುತಿಸಲಾಗಿದ್ದು, ಆರೋಪಿ ರಾಜು ಪರಾರಿಯಾಗಿದ್ದಾನೆ. ಮೃತನ ಸಹೋದರ ಹಾಗೂ ಮಕ್ಕಳು ನೀಡಿದ ಹೇಳಿಕೆಯನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Seema

ಘಟನೆ ಕುರಿತು ಮಾಹಿತಿ ನೀಡಿರುವ ಮೀರತ್​ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಕಂಕೇರಖೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಶೋಭಾಪುರ ಪ್ರದೇಶದ ಲಖ್ವಾಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಇಟ್ಟಿಗೆಯಿಂದ ಜಜ್ಜಿ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಮೃತಳ ಸಹೋದರ, ಮೂವರು ಹೆಣ್ಣುಮಕ್ಕಳು ಹಾಗೂ ನೆರೆಹೊರೆಯವರು ನೀಡಿದ ಹೇಳಿಕೆಯನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. 

ಸೀಮಾ 24 ಗಂಟೆಗಳ ಅವಧಿಯಲ್ಲಿ 13 ರೀಲ್ಸ್(Reels) ​ಅನ್ನು ಅಪ್ಲೋಡ್​ ಮಾಡಿದ್ದಳು. ರೀಲ್ಸ್​ಗಳಿಗೆ ಹೆಚ್ಚು ಲೈಕ್ಸ್​ ಹಾಗೂ ಕಮೆಂಟ್​ಗಳು ಬರಲು ಶುರು ಮಾಡಿದವು. ಇದಲ್ಲದೆ ಸೀಮಾಗೆ ಕೆಲವರು ಕರೆ ಮಾಡಿ ಮಾತನಾಡಿದ್ದಾರೆ. ಈ ವಿಚಾರವಾಗಿ ಪತಿ ರಾಜುಗೆ ತಿಳಿದಿದ್ದು, ದಂಪತಿಗಳ ನಡುವೆ ಜಗಳವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಆರೋಪಿ ರಾಜು ಸೀಮಾಳ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದು, ಬಳಿಕ ಕತ್ತು ಸೀಳಿ ಹತ್ಯೆ ಮಾಡಿ ಆಕೆಯ ಮೊಬೈಲ್​ ತೆಗೆದುಕೊಂಡು ಪರಾರಿಯಾಗಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೀರತ್​ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.

ಗೌರವ-ಘನತೆ ಮಹಿಳೆಯರಿಗೆ ಸೀಮಿತವಲ್ಲ, ಪುರುಷರಿಗೂ ಕೂಡ ಇದೆ: HighCourt

ಸಾವಿರ ಕೋಟಿ ಗಳಿಕೆ ಕಂಡ Pushpa 2; ವೈರಲ್​ ಆಗುತ್ತಿದೆ ಶೇಖಾವತ್​ ರೀ ಎಂಟ್ರಿ ವಿಡಿಯೋ

 

Share This Article

ಅಧಿಕ ಬಿಪಿ ಇರುವವರು ಯಾವ ಆಹಾರದಿಂದ ದೂರವಿರಬೇಕು ಎಂದು ನಿಮಗೆ ತಿಳಿದಿದೆಯೇ? high blood pressure

high blood pressure: ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಬಿಪಿ ಸಮಸ್ಯೆಯೂ ಒಂದು. ಅಧಿಕ…

ಶಿವನ ಕೃಪೆಗೆ ಪಾತ್ರರಾಗಲು ಈ ಒಂದು ಕೆಲಸ ಮಾಡಬೇಕು! Lord Shiva Worship

Lord Shiva Worship: ಪರಮೇಶ್ವರ ಹಿಂದೂಗಳು ಹೆಚ್ಚು ಪೂಜಿಸುವ ದೇವರುಗಳಲ್ಲಿ ಒಂದಾಗಿದೆ. ಭಗವಂತನನ್ನು ಒಂದೊಂದು ಸ್ಥಳದಲ್ಲಿ…

ಈ ದಿನಾಂಕಗಳಂದು ಜನಿಸಿದ ಮಹಿಳೆಯರು ತಮ್ಮ ಗಂಡನಿಗೆ ಅದೃಷ್ಟ ಹೊತ್ತು ತರುತ್ತಾರೆ! Numerology

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಸಂಖ್ಯೆಗಳು ನಮ್ಮ…