ಕೊಳ್ಳುವವರು ಸಿಗಲಿಲ್ಲ ಅಂತ 3 ವರ್ಷದ ಮಗನನ್ನೇ ಕೊಂದ!; ಬಡತನದಿಂದಾಗಿ ಪುತ್ರನನ್ನೇ ಮಾರಾಟಕ್ಕಿಟ್ಟಿದ್ದ..

murder
Published on

ನವದೆಹಲಿ: ಬಡತನದಿಂದಾಗಿ ತನ್ನ ಮೂರು ವರ್ಷದ ಮಗನನ್ನು ಮಾರಾಟಕ್ಕಿಟ್ಟಿದ್ದ ತಂದೆ, ಆತನನ್ನು ಖರೀದಿಸುವವರು ಸಿಗಲಿಲ್ಲವೆಂದು ನೊಂದು ಕೊಂದು ಹಾಕಿದ್ದಾನೆ. ಮೊಹಮದ್ ನೌಷಾದ್ ಎಂಬಾತ ಮಗನನ್ನು ಕೊಂದ ತಂದೆ.

ಬಡತನದಿಂದ ಬಳಲುತ್ತಿದ್ದ ಮೊಹಮದ್​ ನೌಷಾದ್ ಕುಡಿತ ಹಾಗೂ ಜೂಜಿನ ಚಟ ಹೊಂದಿದ್ದ. ಅದಕ್ಕೆ ಹಣ ಹೊಂದಿಸಲಾಗದೆ ತನ್ನ ಮೂರು ವರ್ಷದ ಮಗನನ್ನು ಮೂರು ಲಕ್ಷ ರೂಪಾಯಿಗೆ ಮಾರಾಟಕ್ಕಿಟ್ಟಿದ್ದ. ಈ ಬಗ್ಗೆ ಪತ್ನಿಯ ವಿರೋಧ ಇದ್ದಿದ್ದರಿಂದ ಇಬ್ಬರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಆದರೆ ಮಂಗಳವಾರ ನೆರೆಮನೆಯಿಂದ ಮೊಬೈಲ್​ ಫೋನ್​ ಚಾರ್ಜರ್​ ತರಲು ಹೆಂಡತಿಯನ್ನು ಕಳಿಸಿದ್ದ ನೌಷಾದ್, ಆಕೆ ಮರಳುವಷ್ಟರಲ್ಲಿ ಮಗನನ್ನು ಕೊಂದುಹಾಕಿದ್ದ.

ಉಸಿರುಗಟ್ಟಿಹೋಗಿದ್ದ ಮಗನನ್ನು ತಾಯಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಆತನನ್ನು ಉಳಿಸಿಕೊಳ್ಳಲು ಆಗಿಲ್ಲ. ನೌಷಾದ್​ನ ಈ ಕೃತ್ಯದ ಕುರಿತು ಆತನ ತಂದೆಯೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬುಧವಾರ ನೌಷಾದ್​​ನನ್ನು ಬಂಧಿಸಿದ್ದಾರೆ. ಅಂದಹಾಗೆ ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯ ಧನೊರಾ ಎಂಬಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net