ಸ್ಯಾನಿಟೈಸರ್​ನಿಂದ ಮದ್ಯ ತಯಾರಿಸಿದ... ಮುಂದೆ ಏನಾಯಿತು?

sanitizer
Published on

ರೈಸೆನ್​: ಕೋವಿಡ್​ 19 ಸೋಂಕು ತಗುಲದಂತೆ ಎಚ್ಚರವಹಿಸಲು ಆಲ್ಕೋಹಾಲ್​ ಆಧಾರಿತವಾದ ಸ್ಯಾನಿಟೈಸರ್​ ಬಳಸಿ ಕೈ ಸ್ವಚ್ಛಗೊಳಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದೀಗ ಲಾಕ್​ಡೌನ್​ನಿಂದಾಗಿ ಮದ್ಯದಂಗಡಿಗಳು ಮುಚ್ಚಿರುವ ಕಾರಣ, ಸ್ಯಾನಿಟೈಸರ್​ನಿಂದ ಮದ್ಯ ತಯಾರಿಸಲು ಸಾಕಷ್ಟು ಜನರು ಪ್ರಯತ್ನಿಸುತ್ತಿದ್ದಾರೆ. ಸ್ಯಾನಿಟೈಸರ್​ ಅನ್ನೇ ಕುಡಿದು ಪ್ರಾಣ ಕಳೆದುಕೊಂಡಿರುವ ಹಲವು ಉದಾಹರಣಗಳೂ ನಮ್ಮ ಮುಂದಿವೆ.

ಇಂಥದ್ದರಲ್ಲಿ ಮಧ್ಯಪ್ರದೇಶನ ರೈಸೆನ್​ನ ನಿವಾಸಿ ಆಲ್ಕೋಹಾಲ್​ ಆಧಾರಿತ ಸ್ಯಾನಿಟೈಸರ್​ನಿಂದ ಮದ್ಯ ತಯಾರಿಸಿ, ಸಿಕ್ಕಿಬಿದ್ದಿದ್ದಾನೆ. ಈ ತಂತ್ರಜ್ಞಾನ ಆತನಿಗೆ ಎಲ್ಲಿ, ಹೇಗೆ ಸಿಕ್ಕಿತು? ಆತ ಮದ್ಯ ತಯಾರಿಸುವಲ್ಲಿ ಯಶಸ್ವಿಯಾಗಿದ್ದನೇ ಎಂಬ ಮಾಹಿತಿ ಲಭ್ಯವಿಲ್ಲವಾದರೂ ಸದ್ಯ ಈ ಪೊಲೀಸ್​ ಅತಿಥಿಯಾಗಿರುವ ಸುದ್ದಿ ಬಂದಿದೆ.

ಸುಲ್ತಾನಪುರದ ಬೊರಿಯಾ ಜಾಗಿರ್​ ಗ್ರಾಮದ ನಿವಾಸಿ ಇಂಡಾಲ್​ ಸಿಂಗ್​ ರಾಜಪೂತ್​ ಬಂಧಿತ. ಈತ ಶೇ.72 ಆಲ್ಕೋಹಾಲ್​ ಹೊಂದಿರುವ ಸ್ಯಾನಿಟೈಸರ್​ನಿಂದ ಮದ್ಯ ತಯಾರಿಸುತ್ತಿದ್ದ ಎಂದು ಸುಲ್ತಾನಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇದು ತುಂಬಾ ವಿಶಿಷ್ಟವಾದ ಪ್ರಕರಣವಾಗಿದೆ. ಇಂಡಾಲ್​ ಸಿಂಗ್​ ರಾಜಪೂತ್​ ವಿರುದ್ಧ ಅಬಕಾರಿ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್​ಪಿ ಮೊನಿಕಾ ಶುಕ್ಲಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net