ಸಿನಿಮಾ

3ನೇ ಪತ್ನಿಗಾಗಿ ನಿದ್ದೆ ಮಾಡುತ್ತಿದ್ದ ಮಗನ ಕತ್ತು ಹಿಸುಕಿ ಕೊಂದ ತಂದೆ; ಹತ್ಯೆ ವಿಡಿಯೋ ಹೆಂಡತಿಗೆ ಕಳುಹಿಸಿದ!

ಭೋಪಾಲ್: 3ನೇ ಪತ್ನಿಗಾಗಿ ವ್ಯಕ್ತಿಯೊಬ್ಬ ತನ್ನ 7 ವರ್ಷದ ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಪ್ರತೀಕ್ ಮೃತ, ಈತ 3ನೇ ಕ್ಲಾಸಿನಲ್ಲಿ ಓದುತ್ತಿದ್ದ. ಮಗನನ್ನು ಕೊಂದ ಆರೋಪಿ ತಂದೆ ಶಶಿಪಾಲ್.ಘಟನೆ ಸಂಬಂಧ ಮಂಗಳವಾರ ಶಶಿಪಾಲ್ ಹಾಗೂ ಪತ್ನಿ ಪಾಯಲ್ (23) ನನ್ನು ಪೊಲೀಸರು ಬಂಧಿಸಿದ್ದಾರೆ. ಶಶಿಪಾಲ್ ಮೂರನೇ ಮದುವೆಯಾಗಿದ್ದನು. ಆದರೆ ಮೊದಲ ಪತ್ನಿಯ ಮಗುವಾದ ಪ್ರತೀಕ್​ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು.

ಇದನ್ನೂ ಓದಿ: ದರೋಡೆಗೆ ಬಂದು ಕಂಠಪೂರ್ತಿ ಕುಡಿದು ಮನೆ ಮಾಲೀಕನ ಬೆಡ್​​ರೂಂನಲ್ಲೇ ನಿದ್ರೆಗೆ ಜಾರಿದ ಕಳ್ಳ!

ಪಾಯಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹೀಗಾಗಿ ಈ ಹಿಂದೆ ಮದುವೆಯಾದ ಪತ್ನಿಯಿಂದ ಹುಟ್ಟಿರುವ ಮಗ ಪ್ರತೀಕ್ ನನ್ನು ಕೊಲೆ ಮಾಡಬೇಕು. ಇಲ್ಲವೆಂದಲ್ಲಿ ನಾನು ಮತ್ತೆ ಆ ಮನೆಗೆ ಕಾಲಿಡಲ್ಲ ಎಂದು ಶಶಿಪಾಲ್‍ಗೆ ಪಾಯಲ್ ಎಚ್ಚರಿಕೆ ನೀಡಿದ್ದಳು. ಈ ವಿಚಾರವಾಗಿ ಶಶಿಪಾಲ್​ ತಲೆ ಕೆಡಿಸಿಕೊಂಡಿದ್ದನು.

ಪ್ರತೀಕ್ ಪ್ರತಿನಿತ್ಯ ತನ್ನ ಅಜ್ಜಿ ಜೊತೆನೇ ಮಲಗುತ್ತಿದ್ದನು. ಶಶಿಪಾಲ್, ಮಗನನ್ನು ಕರೆದು ಕೂಲರ್ ಹಾಕಿದ್ದೀನಿ. ಇವತ್ತು ತನ್ನ ಜೊತೆ ನಿದ್ದೆ ಮಾಡುವಂತೆ ಎಂದು ಹೇಳಿ ಮಲಗಿಸಿಕೊಂಡಿದ್ದಾನೆ. ಇತ್ತ ಮಗ ನಿದ್ದೆಗೆ ಜಾರುತ್ತಿದ್ದಂತೆಯೇ ಶಶಿಪಾಲ್ ಟಿವಿ ಸೌಂಡ್​​ ಜಾಸ್ತಿ ಮಾಡಿದ್ದಾನೆ. ನಂತರ ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ ದೃಶ್ಯವನ್ನು ಕೂಡ ಸೆರೆಹಿಡಿದು ಮೂರನೇ ಪತ್ನಿ ಪಾಯಲ್ ಗೆ ವಾಟ್ಸಪ್ ಮೂಲಕ ಕಳುಹಿಸಿದ್ದಾನೆ. ಆದರೆ ಅವಳು ಅದಾಗಲೇ ಈತನ ನಂಬರ್ ಬ್ಲಾಕ್ ಮಾಡಿದ್ದರಿಂದ ವೀಡಿಯೋ ನೋಡಿರಲಿಲ್ಲ. ನಂತರ ಈತ ಅಲ್ಲಿಂದ ಪರಾರಿಯಾಗಿದ್ದಾನೆ.

ಶಶಿಪಾಲ್ ಮೊಬೈಲ್‍ನಲ್ಲಿ ಕೊಲೆಯ ವೀಡಿಯೋ ಪತ್ತೆಯಾಗಿದೆ. ನನ್ನ ಪತಿಗೆ ಮಗನನ್ನು ಸಾಯಿಸುವಂತೆ ನಾನು ಯಾವತ್ತೂ ಹೇಳಿಲ್ಲ. ತನಗೂ ಈ ಕೊಲೆಗೂ ಯಾವುದೇ ಸಂಬಂಧವಿಲ್ಲ ಎಂದು ಪಾಯಲ್ ಹೇಳಿದ್ದಾಳೆ.

ಆಟೋ ರಿಕ್ಷಾಕ್ಕೆ ಡಿಕ್ಕಿಯಾದ ನಿಂಬೆಹಣ್ಣು ತುಂಬಿದ ಟ್ರಕ್; 6 ಮಹಿಳಾ ಕಾರ್ಮಿಕರು ಮೃತ್ಯು, 6 ಮಂದಿ ಗಂಭೀರ

Latest Posts

ಲೈಫ್‌ಸ್ಟೈಲ್