ದರೋಡೆಗೆ ಬಂದು ಕಂಠಪೂರ್ತಿ ಕುಡಿದು ಮನೆ ಮಾಲೀಕನ ಬೆಡ್​​ರೂಂನಲ್ಲೇ ನಿದ್ರೆಗೆ ಜಾರಿದ ಕಳ್ಳ!

hosuse
Published on

ಲಕ್ನೋ: ಮನೆಯೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ಇಬ್ಬರು ದರೋಡೆ ಮಾಡಿದ್ದಾರೆ, ಅವರಲ್ಲಿ ಒಬ್ಬ ಆ ಮನೆಯಲ್ಲಿದ್ದ ದುಬಾರಿ ಮದ್ಯವನ್ನು ಕಂಠ ಪೂರ್ತಿ ಕುಡಿದು ಮನೆ ಮಾಲೀಕನ ಬೆಡ್ ರೂಂನಲ್ಲೇ ಮಲಗಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ನಡೆದಿದ್ದೇನು?: ಮನೆಯ ಮಾಲೀಕ ಶರ್ವಾನಂದ್ ನಿವೃತ್ತ ಸೇನಾ ಸಿಬ್ಬಂದಿಯಾಗಿದ್ದಾರೆ. ತಮ್ಮ ಕುಟುಂಬದೊಂದಿಗೆ ಲಕ್ನೋದ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಲಾ ಕಟಾರಿ ಭಾಗದಲ್ಲಿ ವಾಸಿಸುತ್ತಿದ್ದಾರೆ. ಒಂದು ದಿನ ಶರ್ವಾನಂದ್ ತಮ್ಮ ಸಂಬಂಧಿಕರ ಮನೆಗೆ ಮದುವೆಗೆ ಕುಟುಂಬಸ್ಥರು ಹೋಗಿದ್ದರು. ಇದನ್ನು ಅರಿತ ಕಳ್ಳ ಮನೆಗೆ ನುಗ್ಗಿದ್ದಾನೆ.

ಮದುವೆಯಿಂದ ಹಿಂದಿರುಗಿದ ನಂತರ, ಮನೆ ಗೇಟ್‌ ಮುರಿದುಹೋಗಿರುವುದು ಕಂಡುಬಂದಿದೆ. ಬೀಗವನ್ನು ತೆರೆದಾಗ ಮನೆಯೊಳಗಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೆಡ್‌ರೂಮ್‌ನಲ್ಲಿ ಯುವಕ ಆರಾಮವಾಗಿ ಮಲಗಿದ್ದನ್ನು ನೋಡಿದ್ದಾರೆ. ಅಲ್ಲಿ ಮದ್ಯದ ಖಾಲಿ ಬಾಟಲಿಗಳು ಕೂಡ ಬಿದ್ದಿದ್ದವು. ಕುಟುಂಬಸ್ಥರು ಆತನನ್ನು ಎಬ್ಬಿಸದೆ ತಾನಾಗಿಯೇ ಏಳಲು ಕಾಯುತ್ತಿದ್ದರು. ಕಳ್ಳ ಎಚ್ಚರಗೊಂಡ ತಕ್ಷಣ ಮನೆಯವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

100 ಗ್ರಾಂ ಚಿನ್ನಾಭರಣ, 1.5 ಲಕ್ಷ ಮೌಲ್ಯದ 2 ಕೆ.ಜಿ ಬೆಳ್ಳಿ, ಸುಮಾರು 50 ಸಾವಿರ ಮೌಲ್ಯದ 40 ಬೆಲೆಬಾಳುವ ಸೀರೆಗಳು ಹಾಗೂ ಮಹತ್ವದ ದಾಖಲೆ ಪತ್ರಗಳು ನಾಪತ್ತೆಯಾಗಿವೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಆತನ ಶಾರದಾ ನಗರದ ನಿವಾಸಿ ಸಲೀಂ ಎಂದು ಹೇಳಿದ್ದಾನೆ. ಇಡೀ ಮನೆಯನ್ನು ಶೋಧಿಸಿದ ನಂತರ ಜೊತೆಗೆ ಇದ್ದವನು ಆಭರಣ ದೋಚುವ ಸಲುವಾಗಿ ಮದ್ಯ ಕುಡಿಸಿ ಪರಾರಿಯಾಗಿದ್ದಾನೆ ಎಂದು ಹೇಳಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net