

ಮೂಡುಬಿದಿರೆ: ದಲಿತ ಯುವತಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ದೈಹಿಕ ಸಂಬಂಧ ಮಾಡಿ ಬಳಿಕ ಮದುವೆಗೆ ನಿರಾಕರಿಸಿದ ಮೂಲತಃ ಉಪ್ಪಿನಂಗಡಿ ಬೆದ್ರೋಡಿ ನಿವಾಸಿ, ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿದ್ದ ಸಂಕೇತ್ ಗಾಣಿಗ(31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆತ ಉಡುಪಿ ಮೂಲದ ಯುವತಿಯೊಂದಿಗೆ ಇನ್‌ಸ್ಟಗ್ರಾಂನಲ್ಲಿ ಸಲುಗೆ ಬೆಳೆಸಿ, ದೈಹಿಕವಾಗಿ ಆಕೆಯನ್ನು ಬಳಸಿಕೊಂಡಿದ್ದು, ಬಳಿಕ ಜಾತಿಯ ನೆಪವೊಡ್ಡಿ ಮದುವೆಗೆ ನಿರಾಕರಿಸಿದ್ದಾನೆ ಎಂದು ಯುವತಿ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.