ಅಭಿವೃದ್ಧಿ ಕಾರ್ಯಕ್ಕೆ ಸ್ಥಳೀಯರ ಸಹಕಾರ ಅವಶ್ಯ : ಡಾ.ಭರತ್ ಶೆಟ್ಟಿ ಪ್ರತಿಪಾದನೆ

New Project (21)
Published on

ಗುರುಪುರ: ಲೋಕೋಪಯೋಗಿ ಇಲಾಖೆಯ 4 ಕೋ.ರೂ. ಅನುದಾನದಲ್ಲಿ ಅಭಿವೃದ್ಧಿಗೊಳ್ಳಲಿರುವ ಮಂಗಳೂರು ತಾಲೂಕಿನ ಬೈತುರ್ಲಿ ನೀರುಮಾರ್ಗ ಮಲ್ಲೂರು ಕಲ್ಪನೆ ಜಿಲ್ಲಾ ಮುಖ್ಯರಸ್ತೆಯ ಕಾಮಗಾರಿಗೆ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರು ಬದ್ರಿಯಾನಗರದಲ್ಲಿ ಬುಧವಾರ ಗುದ್ದಲಿಪೂಜೆ ನೆರವೇರಿಸಿದರು.

ಡಾ.ಭರತ್ ಶೆಟ್ಟಿ ಮಾತನಾಡಿ, ಈ ಭಾಗದ ನಾಗರಿಕರ ಬಹುದಿನಗಳ ಬೇಡಿಕೆ ಇದಾಗಿದೆ. ನಿರಂತರ ಮಳೆಯಿಂದ ಸುಮಾರು 2.5 ಕಿ.ಮೀ. ಅಂತರದಲ್ಲಿ ಹಾನಿಗೀಡಾಗಿದೆ. ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ. ಅಭಿವೃದ್ಧಿ ಕಾರ್ಯಕ್ಕೆ ಸ್ಥಳೀಯರ ಸಹಕಾರ ಅವಶ್ಯ. ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಇಲ್ಲ ಎಂದರು.

ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೋಹನ್ ಆಳ್ವ ಸ್ವಾಗತಿಸಿ ಪ್ರಸ್ತಾವಿಸಿದರು. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಮಾ ಎ.ಶೆಟ್ಟಿ, ಅಡ್ಯಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕಮಲಾಕ್ಷ ತಲ್ಲಿಮಾರು, ಮಲ್ಲೂರು ಗ್ರಾಪಂ ಉಪಾಧ್ಯಕ್ಷ ಇಲಿಯಾಸ್, ಮಲ್ಲೂರು ಬಿಜೆಪಿ ಅಧ್ಯಕ್ಷ ದೇವಿಪ್ರಸಾದ್, ಉಳಾಯಿಬೆಟ್ಟು ಗ್ರಾಪಂ ಉಪಾಧ್ಯಕ್ಷ ದಿನೇಶ್ ಬಜಿಲೊಟ್ಟು, ಪ್ರಮುಖರಾದ ಪ್ರದೀಪ್ ನಾಯ್ಕ ದೆಮ್ಮಲೆ, ಪಕ್ಷದ ಕಾರ್ಯಕರ್ತರು, ಸ್ಥಳೀಯರು, ಗುತ್ತಿಗೆದಾರ ಅಬ್ದುಲ್ ಖಾದರ್ ಟಿ.ಆರ್.ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net