ಬೀದಿನಾಯಿಯ ಮೇಲೆ ಕ್ರೌರ್ಯ ಮೆರೆದವನ ಬಂಧನ

dog
Published on

ಕೇಂದ್ರಪರ : ಬೀದಿನಾಯಿಯೊಂದನ್ನು ಅಮಾನುಷವಾಗಿ ಹೊಡೆದು ಸಾಯಿಸಿದ ವ್ಯಕ್ತಿಯೊಬ್ಬನನ್ನು ಒಡಿಶಾ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ನಾಯಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಬಾಬುಲಾ ಸಿಂಗ್​ ಎಂಬ 50 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ರಾಜ್ಯದ ಕೇಂದ್ರಪರ ಜಿಲ್ಲೆಯ ಪ್ರಹರಾಜಪುರದಲ್ಲಿ ಮೇ 28 ರಂದು ಈ ಘಟನೆ ನಡೆದಿದೆ. ಬಾಬುಲಾ ಸಿಂಗ್​ನ ವಿರುದ್ಧ ಐಪಿಸಿ ಸೆಕ್ಷನ್ 429 ಮತ್ತು ಪ್ರಿವೆಂಷನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್​ ಆ್ಯಕ್ಟ್​, 1960 ರ ಸೆಕ್ಷನ್ 11(1) ರಡಿ ಪಟ್ಟಮುಂಡೈ ಪೊಲೀಸ್​ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ತನ್ನ ಎರಡು ಹುಂಜಗಳನ್ನು ಆ ನಾಯಿ ಸಾಯಿಸಿದ್ದರಿಂದ ಅದಕ್ಕೆ ಹೊಡೆದುದಾಗಿ ವಿಚಾರಣೆಯ ವೇಳೆ ಆರೋಪಿ ತಿಳಿಸಿದ್ದಾನೆ. ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಿದೆ ಎಂದು ಪಟ್ಟಮುಂಡೈ ಪೊಲೀಸ್ ಇನ್ಸ್​​ಪೆಕ್ಟರ್​ ರಾಕೇಶ್​ ತ್ರಿಪಾಠಿ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net