More

    ಬಿಗ್​ಬಾಸ್​ ಸ್ಪರ್ಧಿ ನಟಿ ಯುವಿಕ ಚೌಧರಿ ವಿರುದ್ಧ ಅಟ್ರೊಸಿಟೀಸ್​ ಕೇಸು

    ಹನ್ಸಿ (ಹರಿಯಾಣ) : ಹಿಂದಿ ಬಿಗ್​ಬಾಸ್​ ಸ್ಪರ್ಧಿಯಾಗಿದ್ದ ನಟಿ ಯುವಿಕ ಚೌಧರಿ ಅವರು ತಮ್ಮ ವಿಡಿಯೋವೊಂದರಲ್ಲಿ ಪರಿಶಿಷ್ಟ ಜಾತಿಯ ಸಮುದಾಯದ ಬಗ್ಗೆ ಜಾತೀಯ ಹೇಳಿಕೆ ನೀಡಿ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಹರಿಯಾಣದ ಹನ್ಸಿ ನಗರ ಪೊಲೀಸ್​ ಠಾಣೆಯಲ್ಲಿ ಚೌಧರಿ ವಿರುದ್ಧ ಎಸ್​ಸಿಎಸ್​​ಟಿ (ಪ್ರಿವೆಂಷನ್ ಆಫ್​ ಅಟ್ರೋಸಿಟೀಸ್) ಆ್ಯಕ್ಟ್​ ಅಡಿಯಲ್ಲಿ ಎಫ್​.ಐ.ಆರ್​. ದಾಖಲಿಸಲಾಗಿದೆ.

    ಪರಿಶಿಷ್ಟ ಜಾತಿಯ ಜನರ ಬಗ್ಗೆ ಅಪಮಾನಕಾರಿ ಮತ್ತು ಆಕ್ಷೇಪಾರ್ಹ ಮಾತುಗಳನ್ನು ಚೌಧರಿ ಆಡಿದ್ದಾರೆ. ಈ ಬಗೆಗಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ ಎಂದು ದಲಿತ ಹಕ್ಕುಗಳ ಚಳುವಳಿಕಾರ ರಜತ್ ಕಲ್ಸನ್​ ಎಂಬುವರು ದೂರು ಸಲ್ಲಿಸಿದ್ದರು. ಮೇ 26 ರಂದು ಹನ್ಸಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಿಕಿತ ಅಹ್ಲಾವತ್ ಅವರಿಗೆ ಸಲ್ಲಿಸಿದ ದೂರಿನೊಂದಿಗೆ ಸದರಿ ವಿಡಿಯೋದ ಪ್ರತಿಯನ್ನೂ ನೀಡಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಮಹಾಮಾರಿಯಿಂದ ರಕ್ಷಣೆಗೆ ‘ಕರೊನಾ ದೇವಿ’ ವಿಗ್ರಹ ಪ್ರತಿಷ್ಠಾಪನೆ

    ಮೇ 25 ರಂದು ಚೌಧರಿ ಅವರು ಆಕ್ಷೇಪಕ್ಕೆ ಒಳಗಾಗಿರುವ ವಿಡಿಯೋವನ್ನು ಜಾಲತಾಣದಲ್ಲಿ ಶೇರ್ ಮಾಡಿದ್ದರು. ಅದರ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ ಹಲವರು ಅವರನ್ನು ಬಂಧಿಸಬೇಕೆಂದು ಕೋರಿದ್ದರು. ಕೂಡಲೇ ಸಂಬಂಧಪಟ್ಟ ಶಬ್ದದ ಅರ್ಥ ತಮಗೆ ಗೊತ್ತಿರಲಿಲ್ಲ ಎಂದು ಟ್ವಿಟರ್​ನಲ್ಲಿ ಚೌಧರಿ ಕ್ಷಮಾಪಣೆ ಕೋರಿದ್ದರು ಎನ್ನಲಾಗಿದೆ. ಸೈಬರ್​ ಸೆಲ್​ ಪೊಲೀಸರು ತನಿಖೆ ನಡೆಸಿ, ಹನ್ಸಿ ನಗರ ಪೊಲೀಸ್​ ಠಾಣೆಯಲ್ಲಿ ಎಫ್​.ಐ.ಆರ್. ದಾಖಲಿಸಿದ್ದಾರೆ. (ಏಜೆನ್ಸೀಸ್)

    ಆಕ್ಸಿಜನ್ ಕಾನ್ಸಂಟ್ರೇಟರ್​ ಕಾಳದಂಧೆ ಆರೋಪಿ ನವನೀತ್ ಕಾಲ್ರಾಗೆ ಜಾಮೀನು

    ಕೋವಿಡ್ ನಿಯಂತ್ರಣಕ್ಕೆ ಹೊಸ ಅಸ್ತ್ರ : ಲಘುವಿಮಾನದಲ್ಲಿ ಔಷಧ ಸಿಂಪಡಣೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts