More

    ಕರೊನಾದಿಂದ ತಬ್ಬಲಿಯಾದ ಮಕ್ಕಳ ನೆರವಿಗೆ ಧಾವಿಸಿದ ಸರ್ಕಾರ: ವಿಮಾ, ಪೆನ್ಷನ್‌ ಜತೆಗೆ ಶಿಕ್ಷಣ ವ್ಯವಸ್ಥೆ

    ಬಾಗಲಕೋಟೆ: ಕರೊನಾದಿಂದ ತಂದೆ-ತಾಯಿಯಂದಿರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ನೆರವಿಗೆ ಧಾವಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಈ ಮಕ್ಕಳಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಬಾಗಲಕೋಟೆಯಲ್ಲಿ ಮಾತನಾಡಿದ ಕಾರಜೋಳ, ಎರಡೂ ಸರ್ಕಾರಗಳು ನೆರವಿಗೆ ಧಾವಿಸಲಿವೆ. ಈ ಕುರಿತು ಸರ್ವೆ ಮಾಡಲು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

    ಅನಾಥರಾಗಿರುವ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಎಲ್ಲ ರೀತಿಯ ಯೋಜನೆ ರೂಪಿಸಲಾಗಿವೆ. ಇಂಥ ಮಕ್ಕಳನ್ನು ಸರ್ಕಾರವೇ ಜೋಪಾನ ಮಾಡಲಿದೆ ಎಂದರು. ಜತೆಗೆ ಮಕ್ಕಳಿಗೆ ಮೂರುವರೆ ಸಾವಿರ ರೂಪಾಯಿ ಪೆನ್ಷನ್‌ ನೀಡಲಾಗುವುದು, ಕೇಂದ್ರ ಸರ್ಕಾರ ಕೂಡ 10 ಲಕ್ಷ ರೂಪಾಯಿ ವಿಮಾ ವ್ಯವಸ್ಥೆ ಮಾಡಿದೆ. ಮಾತ್ರವಲ್ಲದೇ 18 ವರ್ಷಗಳ ನಂತರ ಉನ್ನತ ಶಿಕ್ಷಣಕ್ಕೆ ಉಪಯೋಗಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

    ಕೇಂದ್ರೀಯ ವಿದ್ಯಾಲಯ, ವಸತಿ ಶಾಲೆಗಳಲ್ಲಿ ಕೋವಿಡ್‌ನಿಂದ ಅನಾಥವಾಗಿರುವ ಮಕ್ಕಳಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಂಥ ಮಕ್ಕಳು ಇದ್ದರೆ ಗುರುತಿಸಿ ಸರ್ಕಾರಕ್ಕೆ ಒಪ್ಪಿಸಬೇಕಿದೆ ಎಂದರು.

    ಮೈಸೂರಿನಲ್ಲಿ ಹೃದಯವಿದ್ರಾವಕ ಘಟನೆ: ಮುದ್ದಾದ ಮಕ್ಕಳನ್ನು ತಬ್ಬಲಿ ಮಾಡಿದ ಕ್ರೂರಿ ಕರೊನಾ

    ‘ಮೂರ್ಖ ವಿಜ್ಞಾನ’ ವಿವಾದದಿಂದ ಕ್ರೈಸ್ತ ಧರ್ಮದ ಪ್ರಚಾರದವರೆಗೆ…

    ಭಾರತೀಯ ಸೇನೆಯಲ್ಲಿ ಇಂಜಿನಿಯರ್ಸ್​ಗೆ ಬೇಡಿಕೆ: 189 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಮದ್ವೆಯಾಗಿ ಮಗುವಾದ್ರೂ ಕಾಡುತ್ತಿದ್ದ ಪ್ರಿಯಕರ: ತಾನೇ ಮುಂದೆ ನಿಂತು ತಾಳಿ ಕಟ್ಟಿಸಿದ ಪತಿರಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts