ಭಾರತೀಯ ಸೇನೆಯಲ್ಲಿ ಇಂಜಿನಿಯರ್ಸ್​ಗೆ ಬೇಡಿಕೆ: 189 ಹುದ್ದೆಗಳಿಗೆ ಅರ್ಜಿ ಆಹ್ವಾನ

udyoga short service
Published on

ಭಾರತೀಯ ಸೇನೆಯಿಂದ ಇಂಜಿನಿಯರಿಂಗ್​ ಪದವೀಧರರಾಗಿರುವ ಅವಿವಾಹಿತ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಮತ್ತು ರಕ್ಷಣಾ ಸಿಬ್ಬಂದಿಯ ವಿಧವಾ ಅಭ್ಯರ್ಥಿಗಳಿಂದ ಶಾರ್ಟ್​ ಸವಿರ್ಸ್​ ಕಮಿಷನ್​ (ಎಸ್​ಎಸ್​ಸಿ) ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಸ್ಥಾನಗಳು: 189

ಎಸ್​ಎಸ್​ಸಿ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚೆನ್ನೈನ ಆಫೀಸರ್ಸ್​ ಟ್ರೇನಿಂಗ್‌​ ಅಕಾಡೆಮಿಯಲ್ಲಿ (ಒಟಿಎ) ತರಬೇತಿ ನೀಡಲಾಗುವುದು. 189 ಸ್ಥಾನಗಳಲ್ಲಿ ಪುರುಷ ಅಭ್ಯರ್ಥಿಗೆ 175 ಸ್ಥಾನ, ಮಹಿಳಾ ಅಭ್ಯರ್ಥಿಗೆ 14 ಸ್ಥಾನ ಮೀಸಲಿರಿಸಲಾಗಿದೆ.

ಇಂಡಿಯನ್​ ಮಿಲಿಟರಿ ಅಕಾಡೆಮಿಯಲ್ಲಿ ನೀಡಲಾಗುವ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಸೇನೆಯಲ್ಲಿ ಲೆಫ್ಟಿನೆಂಟ್​ ಹಂತದ ಹುದ್ದೆಗಳನ್ನು ನೀಡಲಾಗುವುದು. ತರಬೇತಿಯ ಅವಧಿಯು 49 ವಾರಗಳಾಗಿರುತ್ತದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ವಿವಾಹವಾಗುವಂತಿಲ್ಲ.

ಯಾವ ವಿಭಾಗಗಳಲ್ಲಿ ತರಬೇತಿ, ಎಷ್ಟು ಸ್ಥಾನ?
* ಸಿವಿಲ್​/ ಬಿಲ್ಡಿಂಗ್​ ಕನ್​ಸ್ಟ್ರಕ್ಷನ್​ ಟೆಕ್ನಾಲಜಿ - 65
* ಆಕಿರ್ಟೆಕ್ಚರ್​ - 1
* ಮೆಕ್ಯಾನಿಕಲ್​ - 6
* ಎಲೆಕ್ಟ್ರಿಕಲ್​/ ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​ - 9
* ಎಲೆಕ್ಟ್ರಾನಿಕ್ಸ್​ - 2
* ಕಂಪ್ಯೂಟರ್​ ಸೈನ್ಸ್​ ಆ್ಯಂಡ್​ ಇಂಜಿನಿಯರಿಂಗ್​/ ಕಂಪ್ಯೂಟರ್​ ಟೆಕ್ನಾಲಜಿ/ ಎಂಎಸ್ಸಿ ಕಂಪ್ಯೂಟರ್​ ಸೈನ್ಸ್​ - 35
* ಇನ್​ಮೇರ್ಷನ್​ ಟೆಕ್ನಾಲಜಿ - 14
* ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಟೆಲಿಕಮ್ಯುನಿಕೇಷನ್​ - 5
* ಟೆಲಿಕಮ್ಯುನಿಕೇಷನ್​ ಇಂಜಿನಿಯರಿಂಗ್​ - 4
* ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ - 5
* ಸ್ಯಾಟಲೈಟ್​ ಕಮ್ಯುನಿಕೇಷನ್​ - 3
* ಮೈಕ್ರೋ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಮೈಕ್ರೋವೇವ್​ - 3
* ಏರೋನಾಟಿಕಲ್​ / ಏರೋಸ್ಪೇಸ್​/ ಎವಿಯೋನಿಕ್ಸ್​ - 7
* ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಇನ್​ಸ್ಟ್ರುಮೆಂಟೇಷನ್​/ ಇನ್​ಸ್ಟ್ರುಮೆಂಟೇಷನ್​ - 4
* ಆಟೋಮೊಬೈಲ್​ ಇಂಜಿನಿಯರಿಂಗ್​ - 3
* ಇಂಡಸ್ಟ್ರಿಯಲ್​/ ಮ್ಯಾನುಫ್ಯಾಕ್ಚರಿಂಗ್​/ ಇಂಡಸ್ಟ್ರಿಯಲ್​ ಇಂಜಿನಿಯರಿಂಗ್​ - 6
* ಓಪ್ಟೋ ಎಲೆಕ್ಟ್ರಾನಿಕ್ಸ್​ - 3
* ಫೈಬರ್​ ಆಪ್ಟಿಕ್ಸ್​ - 2
* ಬಯೋ ಟೆಕ್ನಾಲಜಿ - 1
* ಬ್ಯಾಲಿಸ್ಟಿಕ್ಸ್​ ಇಂಜಿನಿಯರಿಂಗ್​ - 1
* ರಬ್ಬರ್​ ಟೆಕ್ನಾಲಜಿ - 1
* ಕೆಮಿಕಲ್​ ಇಂಜಿನಿಯರಿಂಗ್​ - 1
* ವರ್ಕ್​ಶಾಪ್​ ಟೆಕ್ನಾಲಜಿ - 3
* ಲೇಸರ್​ ಟೆಕ್ನಾಲಜಿ - 2

ಶೈಕ್ಷಣಿಕ ಅರ್ಹತೆ: ಇಂಜಿನಿಯರಿಂಗ್​ ಪದವಿ ಪಡೆದಿರುವ ಅಥವಾ ಅಂತಿಮ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ (1.10.2021ಕ್ಕೆ ಪದವಿ ಪ್ರಮಾಣಪತ್ರ ಪಡೆಯುವಂತಿರಬೇಕು) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿಧವಾ ಅಭ್ಯರ್ಥಿಗಳು ನಾನ್​ ಟೆಕ್ನಿಕಲ್​ ಹುದ್ದೆಗೆ ಯಾವುದೇ ಪದವಿ ಪಡೆದಿರಬೇಕು. ಟೆಕ್ನಿಕಲ್​ ಹುದ್ದೆಗೆ ಬಿಇ/ಬಿ.ಟೆಕ್​ ಪದವಿ ಪಡೆದಿರಬೇಕು.

ವಯೋಮಿತಿ: 1.10.2021ಕ್ಕೆ ಅನ್ವಯವಾಗುವಂತೆ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ, ಗರಿಷ್ಠ 27 ವರ್ಷ (2.10.1994-1.10.2001ರ ನಡುವೆ ಜನಿಸಿರಬೇಕು). ವಿಧವಾ ಅಭ್ಯರ್ಥಿಗೆ ಗರಿಷ್ಠ 35 ವರ್ಷ, (2.7.1994 ರಿಂದ 1.7.2001ರ ನಡುವೆ ಜನಿಸಿರಬೇಕು)

ಸ್ಟೈಪೆಂಡ್: ಐಎಂಎ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ 56,100 ರೂ. ಸ್ಟೈಪೆಂಡ್​ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 23.6.2021
ಅಧಿಸೂಚನೆಗೆ: https://bit.ly/3fofaNj

ಮಾಹಿತಿಗೆ: www.joinindianarmy.nic.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net