More

    ‘ಮೂರ್ಖ ವಿಜ್ಞಾನ’ ವಿವಾದದಿಂದ ಕ್ರೈಸ್ತ ಧರ್ಮದ ಪ್ರಚಾರದವರೆಗೆ…

    ನವದೆಹಲಿ: ಕರೊನಾ ವೈರಸ್‌ಗೆ ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಬಿಡುಗಡೆ ಮಾಡಿರುವ ಔಷಧಗಳನ್ನು ಪಡೆದು ಕೂಡ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳುತ್ತಿರುವುದು ಹಾಗೂ ಇದರ ಹಿಂದೆಯೇ, ಈ ಔಷಧಗಳು ಪರಿಣಾಮಕಾರಿಯಾಗಿಲ್ಲ ಎಂದು ಖುದ್ದು ತಜ್ಞರೇ ಹೇಳುತ್ತಿರುವುದನ್ನು ಟೀಕಿಸಿದ್ದ ಬಾಬಾ ರಾಮ್‌ದೇವ್‌ ಅಲೋಪಥಿಯು ’ಮೂರ್ಖ ವಿಜ್ಞಾನ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಕಳೆದೊಂದು ವಾರದಿಂದ ವೈದ್ಯಕೀಯ ಲೋಕದಲ್ಲಿ ಭಾರಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ.

    ಈ ಹೇಳಿಕೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕಿಡಿ ಕಾರಿದ್ದು, ಬಾಬಾ ರಾಮ್‌ದೇವ್‌ ವಿರುದ್ಧ ದೂರು ದಾಖಲಿಸಿ 1000 ಕೋಟಿ ರೂಪಾಯಿಗಳ ಮಾನಹಾನಿ ಮೊಕದ್ದಮೆ ದಾಖಲು ಮಾಡಿದೆ. ಕಾಂಗ್ರೆಸ್‌ ಧುರೀಣರು ಸೇರಿದಂತೆ ಬಾಬಾ ರಾಮ್‌ದೇವ್‌ ವಿರೋಧಿಗಳು ಕೂಡ ಇವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇವೆಲ್ಲವೂ ಇದೀಗ ಹಳೆಯ ಸುದ್ದಿ.

    ಆದರೆ ಇದೀಗ, ಈ ವಿವಾದ ಇದೀಗ ಕುತೂಹಲದ ತಿರುವು ಪಡೆದುಕೊಂಡಿದೆ. 1928ರಲ್ಲಿ ಶುರುವಾಗಿರುವ ಭಾರತೀಯ ವೈದ್ಯಕೀಯ ಸಂಘವು ಸ್ವಯಂ ಸೇವಾ ಸಂಸ್ಥೆ (ಎನ್‌ಜಿಓ) ಆಗಿದ್ದು, ಇದು ಕ್ರೈಸ್ತ ಧರ್ಮದ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಇದೇ ಕಾರಣಕ್ಕೆ ಭಾರತದ ಸಾಂಪ್ರದಾಯಿಕ ಔಷಧಿಯ ವಿರುದ್ಧ ಅದೀಗ ತಿರುಗಿ ಬಿದ್ದಿದೆ ಎಂಬ ಆರೋಪಗಳು ಕೇಳಿಬರತೊಡಗಿದೆ. ಈ ಕುರಿತು ಜಾಲತಾಣದಲ್ಲಿ ಕೂಡ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವಿಷಯವಾಗಿ ಮಾತನಾಡಿರುವ ಬಾಬಾ ರಾಮ್‌ದೇವ್‌ ಅವರ ಆಪ್ತ, ಆಚಾರ್ಯ ಬಾಲಕೃಷ್ಣ ಅವರ ಹೇಳಿಕೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಐಎಎಂ ಅಧ್ಯಕ್ಷ ಡಾ.ಜಾನ್ರೋಸ್‌ ಜಯಲಾಲ್‌ ಅವರು ಇಡೀ ಭಾರತವನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಸಂಚು ರೂಪಿಸುತ್ತಿದ್ದಾರೆ, ಅವರ ಭಾಷಣದಲ್ಲಿ ಇದು ಸಾಬೀತಾಗಿದೆ ಎಂದು ಬಾಲಕೃಷ್ಣ ಅವರು ಹೇಳಿಕೆ ನೀಡಿದ್ದಾರೆ.

    ಇದೇ ಆರೋಪ ಮಾಡಿ ಈಗ ದೆಹಲಿಯ ವಕೀಲ ವಿಷ್ಣು ಶರ್ಮಾ ಅವರು ಜಯಲಾಲ್‌ ವಿರುದ್ಧ ಕೇಸ್‌ ದಾಖಲು ಮಾಡಿದ್ದಾರೆ. ಜಯಲಾಲ್‌ ಅವರು ತಮ್ಮ ಪ್ರತಿಯೊಂದು ಭಾಷಣದಲ್ಲಿ ಕ್ರೈಸ್ತ ಧರ್ಮದ ಬಳಕೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕ್ರೈಸ್ತ ಧರ್ಮದ ಪ್ರಚಾರ ಮಾಡುವ ಮೂಲಕ ಜನರ ನಡುವೆ ಧರ್ಮದ್ವೇಷವನ್ನು ಹುಟ್ಟುಹಾಕುತ್ತಿದ್ದಾರೆ. ಮಾತ್ರವಲ್ಲದೇ ಮಾಧ್ಯಮಗಳ ಜತೆ ನಡೆಸುವ ಸಂದರ್ಶನಗಳಲ್ಲಿಯೂ ತಮ್ಮ ಧರ್ಮದ ಕುರಿತೇ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ದಾಖಲು ಮಾಡಿದ್ದಾರೆ.

    ಅವರಪ್ಪನಿಂದಲೂ ಬಂಧಿಸಲು ಸಾಧ್ಯವಿಲ್ಲ- ‘ಮೂರ್ಖರ ವಿಜ್ಞಾನ’ದ ಪ್ರತಿಭಟನೆಗೆ ಬಾಬಾ ರಾಮ್‌ದೇವ್‌ ಪ್ರತಿಕ್ರಿಯೆ

    ಬಾಬಾ ರಾಮ್‌ದೇವ್‌ ಕೊರೊನಿಲ್‌ ಔಷಧಕ್ಕೆ ಬೇಡಿಕೆ- ಒಂದು ಲಕ್ಷ ಸೋಂಕಿತರಿಗೆ ಉಚಿತವಾಗಿ ಕಿಟ್ ವಿತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts