Malayalam actor | ಲೈಂಗಿಕ ಕಿರುಕುಳ ಆರೋಪ: ಮಲಯಾಳಂ ನಟ ಇಡವೇಳ ಬಾಬು ಬಂಧನ, ಬಿಡುಗಡೆ

Malayalam actor IdavelaBabu
Published on

ಕೊಚ್ಚಿ: ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಲಯಾಳಂ ನಟ Malayalam actor ಇಡವೇಳ ಬಾಬು ಅವರನ್ನು ಬುಧವಾರ ಬಂಧಿಸಲಾಯಿತು. ಆದರೆ ಅವರು ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ವೈದ್ಯಕೀಯ ಪರೀಕ್ಷೆ ಮಾಡಿ ಅವರನ್ನು ಬಿಡುಗಡೆ ಮಾಡಲಾಯಿತು.

ಕೇರಳಾ ಸಿನಿಮಾ ರಂಗದಲ್ಲಿ ನಟಿಯ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಬಗ್ಗೆ ನ್ಯಾಯಮೂರ್ತಿ ಹೇಮ ಸಮಿತಿ ಸಲ್ಲಿಸಿದ ವರಿದಯ ಬಗ್ಗೆ ಎಸ್​ಐಟಿ ತನಿಖೆ ನಡೆಸುತ್ತಿದೆ, ಪ್ರಕರಣದ ಸಂಬಂಧ ಎರಡನೇ ಬಂಧನ ಇದಾಗಿದೆ. ಮಂಗಳಾವರ ನಟ, ಶಾಸಕ ಮುಕೇಶ್ ಅವರನ್ನು ಬಂಧಿಸಲಾಗಿತ್ತು. ಅವರೂ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ಬಿಡುಗಡೆಯಾಗಿದ್ದರು.

ಇಂದು ಬೆಳಿಗ್ಗೆ ಕೊಚ್ಚಿಯಲ್ಲಿರುವ ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗಿದ್ದರು. ಬೆಳಗ್ಗೆ 10 ಗಂಟೆ ಸುಮಾರಿಗೆ ವಿಚಾರಣೆ ಆರಂಭಗೊಂಡಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಪೊಲೀಸರು ಅವರನ್ನು ಬಂಧಿಸಿದ್ದರು. ಬಾಬು ವಿರುದ್ಧ ಆಗಸ್ಟ್​ 28ರಂದು ಎರ್ನಾಕುಲಂ ನಗರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೂರಿನ ಪ್ರಕಾರ, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದಲ್ಲಿ (ಅಮ್ಮ) ಸಂಘಟನೆಯ ಸದಸ್ಯತ್ವಕ್ಕಾಗಿ ಬಾಬು ಅವರನ್ನು ಸಂಪರ್ಕಿಸಿದ್ದೆ, ಈ ವೇಳೆ ಅರ್ಜಿ ತುಂಬಲು ಫ್ಲಾಟ್‌ಗೆ ಆಹ್ವಾನಿಸಿ ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net