Lucknow | ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ಕುರ್ಚಿಯಿಂದ ಬಿದ್ದು ಎಚ್​ಡಿಎಫ್​ಸಿ ಬ್ಯಾಂಕ್ ಉದ್ಯೋಗಿ ಸಾವು!

HDFC Bank employee dies
Published on

ಲಖನೌ: ಇವೈ ಕಂಪನಿ ಉದ್ಯೋಗಿ ಅನ್ನಾ ಸೆಬಾಸ್ಟಿಯನ್ ಸಾವಿನ ಸುದ್ದಿ ಚರ್ಚೆಯಾಗುತ್ತಿರುವುದರ ಬೆನ್ನಲ್ಲೇ ಕೆಲಸ ಒತ್ತಡದಿಂದ ಇಲ್ಲಿನ Lucknow  ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ಕುರ್ಚಿಯಿಂದ ಬಿದ್ದು ಎಚ್​ಡಿಎಫ್​ಸಿ ಬ್ಯಾಂಕ್ ಉದ್ಯೋಗಿ ಸಾವು! ಎಚ್​ಡಿಎಫ್​ಸಿ ಬ್ಯಾಂಕ್​ನ ಮಹಿಳಾ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ  ಎಂದು ವರದಿಯಾಗಿದೆ.

ಮಂಗಳವಾರ (ಸೆ.24) ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಸದಾಫ್ ಫಾತಿಮಾ ಎಂದು ಗುರುತಿಸಲಾಗಿದೆ. ಗೋಮ್ತಿನಗರದಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿಬೂತಿ ಖಂಡ್ ಶಾಖೆಯಲ್ಲಿ ಹೆಚ್ಚುವರಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಕೆಲಸದ ಒತ್ತಡದಿಂದ ಸದಾಫ್ ಫಾತಿಮಾ ಸಾವನ್ನಪ್ಪಿದ್ದಾರೆ ಎಂದು ಆಕೆಯ ಸಹೋದ್ಯೋಗಿಗಳ ಹೇಳಿಕೆಯನ್ನು ಉಲ್ಲೇಖಿಸಿ ಹಿಂದಿ ಪತ್ರಿಕೆ ದೈನಿಕ್ ಭಾಸ್ಕರ್ ವರದಿ ಮಾಡಿದೆ.

ಮಂಗಳವಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ವೇಳೆ ಫಾತಿಮಾ ಅವರು ಕುರ್ಚಿಯಿಂದ ಬಿದ್ದಿದ್ದು, ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಮೃತಪಟ್ಟಿದ್ದಾರೆ. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಬ್ಯಾಂಕ್ ಉದ್ಯೋಗಿ ಸಾವಿನ ಕುರಿತು ಆತಂಕ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್, ಇದು ಆತಂಕಕಾರಿ ವಿಷಯವಾಗಿದೆ. ದೇಶದ ಪ್ರಸ್ತುತ ಆರ್ಥಿಕ ಒತ್ತಡವನ್ನು ಪ್ರತಿಬಿಂಬಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕಂಪನಿಗಳು ಹಾಗೂ ಸರ್ಕಾರಿ ಇಲಾಖೆಗಳು ಗಂಭೀರವಾಗಿ ಯೋಚಿಸಬೇಕು. ಇದು ದೇಶದ ಮಾನವ ಸಂಪನ್ಮೂಲಕ್ಕೆ ತುಂಬಲಾರದ ನಷ್ಟ ಎಂದು ಬರೆದುಕೊಂಡಿದ್ದಾರೆ.

ಪುಣೆಯ ಇವೈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಕೊಚ್ಚಿಯ ನಿವಾಸಿ, ಸಿಎ ಪದವೀಧರೆ ಅನ್ನಾ ಸೆಬಾಸ್ಟಿಯನ್‌ ಪೆರಾಯಿಲ್‌ ಕೇವಲ 26ನೇ ವರ್ಷಕ್ಕೆ ಸಾವಿಗೀಡಾಗಿದ್ದರು. ಈ ಸಂಬಂಧ ಇವೈ ಇಂಡಿಯಾದ ಅಧ್ಯಕ್ಷ ರಾಜೀವ್‌ ಮೆಮಾನಿ ಅವರಿಗೆ ಪತ್ರ ಬರೆದಿದ್ದ ಆಕೆಯ ತಾಯಿ, ಕೆಲಸದ ಸ್ಥಳದಲ್ಲಿನ ಒತ್ತಡವೇ ಅನ್ನಾಳನ್ನು ಬಲಿ ತೆಗೆದುಕೊಂಡಿದೆ ಎಂದು ದೂರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net