

Gobi: ಮಳೆಗಾಲ ಶುರುವಾಗಿದೆ.. ಚಳಿ ವಾತಾವರಣ ಇರುವುದರಿಂದ ಬಿಸಿ ಬಿಸಿಯಾಗಿ ಎನಾದರೂ ತಿನ್ನ ಬೇಕು ಎಂದು ಆಸೆ ಆಗುತ್ತದೆ. ಸಂಜೆಯ ಸಮಯದಲ್ಲಿ ನಿಮಗೆ ಏನಾದ್ರೂ ತಿನ್ಬೇಕು ಅಂತ ಇದ್ದರೆ ಸೋಯಾ ಚಂಕ್ಸ್ ಗೋಬಿ ಮಾಡಲು ಒಮ್ಮೆ ಟ್ರೈ ಮಾಡಿ...
* ಸೋಯಾ ಚಂಕ್ಸ್
* 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
* 1 ಚಮಚ ಕಾರದಪುಡಿ
* 1/2 ಚಮಚ ಜೀರಿಗೆ ಪುಡಿ
* 1/2 ಚಮಚ ಗರಂ ಮಸಾಲ
* 1/2 ಚಮಚ ಚಿಕನ್ ಮಸಾಲ
* ರುಚಿಗೆ ತಕ್ಕಷ್ಟು ಉಪ್ಪು
* 3 ಚಮಚ ಕಾನ್ಫ್ಲೋರ್
* 3 ಚಮಚ ಮೈದಾಹಿಟ್ಟು
* ಸ್ವಲ್ಪ ನಿಂಬೆ ರಸ
* 1 ಕಪ್ ಈರುಳ್ಳಿ
* 2 ಹಸಿರು ಮೆಣಸಿನಕಾಯಿ
ಒಂದು ಪಾತ್ರೆಯಲ್ಲಿ ಬಿಸಿನೀರು ಕಾಯಿಸಿ, ಆ ನೀರಿಗೆ ಸೋಯಾ ಚಂಕ್ಸ್ ಹಾಕಿ ಕುದಿಸಬೇಕು. ನಂತರ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಚಿಕನ್ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ಕಾನ್ಫ್ಲೋರ್ ಮೈದಾಹಿಟ್ಟು, ಸ್ವಲ್ಪ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ ಅದಕ್ಕೆ ಸೋಯಾ ಚಂಕ್ಸ್ ಹಾಕಿ ಮಿಶ್ರಣ ಮಾಡಿ. ನಂತರ ಒಂದು ಕಡಾಯಿಗೆ ಎಣ್ಣೆ ಹಾಕಿ ಬಿಸಿ ಮಾಡಿ.. ಮಸಾಲೆಯಲ್ಲಿ ಮಿಶ್ರಣ ಮಾಡಿದ ಸೋಯಾ ಚಂಕ್ಸ್ ಕರಿದುಕೊಳ್ಳ ಬೇಕು.
ನಂತರ ಕಡಾಯಿಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮಟೋ ಸಾಸ್, ಸೊಯಾ ಸಾಸ್, ಚಿಲ್ಲಿ ಸಾಸ್ ಖಾರದಪುಡಿ, ದನಿಯಾಪುಡಿ, ಗರಂಮಸಾಲ ಹಾಕಿ ಗ್ರೇವಿ ರೆಡಿ ಮಾಡಿಕೊಂಡು, ಅದಕ್ಕೆ ಕರಿದಂತಹ ಸೋಯಾ ಚಂಕ್ಸ್, ಕೊತ್ತುಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿದರೆ ಸೋಯಾ ಚಂಕ್ಸ್ ಗೋಬಿ ಸವಿಯಲು ಸಿದ್ಧವಾಗುತ್ತದೆ. (ಏಜೆನ್ಸೀಸ್)