

Student: 26 ವರ್ಷದ ವಿದ್ಯಾರ್ಥಿಯೊಬ್ಬ ಮುಂಬೈನ ಐಐಟಿ ಕ್ಯಾಂಪಸ್ನ 10ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ (ಆ.02) ನಡೆದಿದೆ.
ದೆಹಲಿ ಮೂಲದ ರೋಹಿತ್ ಸಿನ್ಹಾ(26) ಮೃತ. ಮೆಟಲರ್ಜಿಕಲ್(Metallurgical) ಸೈನ್ಸಸ್ ವಿಭಾಗದಲ್ಲಿ ನಾಲ್ಕನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಪೊಲೀಸರ ಪ್ರಕಾರ, ಈ ಘಟನೆ ಬೆಳಗಿನ ಜಾವ 2:30ರ ಸುಮಾರಿಗೆ ನಡೆದಿದೆ. ಆ ವೇಳೆ ಇನ್ನೊಬ್ಬ ವಿದ್ಯಾರ್ಥಿ ಫೋನ್ನಲ್ಲಿ ಮಾತನಾಡುತ್ತಾ ಇರುವಾಗ ರೋಹಿತ್ ಟೆರಸ್ ಮೇಲಿನಿಂದ ಜಿಗಿಯುವುದನ್ನು ನೋಡಿದ್ದಾನೆ. ಘಟನೆ ನಂತರ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕಾರಣ ಏನೆಂಬುದನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಆತ್ಮಹತ್ಯೆ ನಿರ್ಧಾರಕ್ಕೆ ಶೈಕ್ಷಣಿಕ ಒತ್ತಡ ಕಾರಣವಾಗಿರಬಹುದೇ ಎಂದು ಪೊಲೀಸರು ಶಂಕಿಸಿದ್ದಾರೆ. (ಏಜೆನ್ಸೀಸ್)