

Mahesh Babu: ಮಹೇಶ್ ಬಾಬು ತೆಲುಗು ಚಿತ್ರರಂಗದ ಹೆಸರುವಾಸಿ ನಟ ಎಂದರೆ ಸಂದೇಹವಿಲ್ಲ. ಅವರ ತಂದೆ ನಟ ಕೃಷ್ಣ ಅವರ ಪರಂಪರೆಯನ್ನು ಚಿತ್ರರಂಗದಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿರುವಂತಹ ನಟ ತನ್ನ ನಟನೆಯ ಶೈಲಿಯಲ್ಲಿ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ, ಈಗ ನಟನ ಕುಟುಂಬದ ಮತ್ತೊಬ್ಬ ಸದಸ್ಯೆ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರಂತೆ. ಅವರು ಯಾರು ಗೊತ್ತೇ? ಅದು ಅವರ ಸೋದರ ಸೊಸೆ ಜಾನ್ವಿ ಸ್ವರೂಪ್ ಎಂದು ಊಹಾಪೋಹಗಳು ಸೃಷ್ಟಿಯಾಗಿವೆ.
ಮಹೇಶ್ ಬಾಬು ಅವರ ಸಹೋದರಿ ಮಂಜುಳಾ ಘಟ್ಟಮನೇನಿ ತಮ್ಮ ಮಗಳು ಜಾನ್ವಿ ಸ್ವರೂಪ್ ಅವರ ಹುಟ್ಟುಹಬ್ಬದ ದಿನವಾದ ಇಂದು (ಅ.29) ಅವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನನ್ನ ಪುಟ್ಟ ಹುಡುಗಿ ಜಾನ್ವಿ ಇದೀಗ ಬೆಳೆದು ತನ್ನದೇ ಆದ ಬೆಳಕಿನಲ್ಲಿ ಹೆಜ್ಜೆ ಹಾಕಲು ಸಿದ್ಧಳಾಗಿದ್ದಾಳೆ. ಆಕೆ ಬೆಳಕಿನ ಪರಂಪರೆಯನ್ನು ಹೊಂದಿದ್ದಾಳೆ. ಮತ್ತೆ ಇದೀಗ ಆಕೆ ಹೊಳೆಯುವಂತಹ ಸಮಯ. ಅವಳ ಪ್ರತಿಭೆಯನ್ನು ನಾನು ನಂಬುತ್ತೇನೆ. ನಾನು ಕಂಡಂತಹ ಜಗತ್ತನ್ನು ಆಕೆ ಶೀಘ್ರದಲ್ಲಿಯೇ ನೋಡುತ್ತಾಳೆ. ನನ್ನ ಪ್ರಿಯತಮೆ ಪರದೆಯು ನಿನಗಾಗಿ ಕಾಯುತ್ತಿದೆ. ಜನ್ಮದಿನದ ಶುಭಾಶಯಗಳು, ನನ್ನ ಜಾನು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಜಾನ್ವಿ ಅವರ ತಾಯಿ ಮಾಡಿದಂತಹ ಇತ್ತೀಚಿನ ಪೋಸ್ಟ್ ಮಗಳು ಚಿತ್ರರಂಗಕ್ಕೆ ಸಿದ್ಧರಾಗಿದ್ದಾರೆ ಎಂದು ಸೂಚಿಸುತ್ತಿದೆ.
ಚಿತ್ರಗಳ ಬಗ್ಗೆ ನೇರಪ್ರಸಾರವಾದ ನಂತರ, ಅಭಿಮಾನಿಗಳು ಜಾನ್ವಿ ಅವರಿಗೆ ಶುಭಾಷಯಗಳನ್ನು ಕೋರಿದ್ದಾರೆ. ನಟಿ ಮಂಚು ಲಕ್ಷ್ಮೀ ಕೂಡಾ ಕಮೆಂಟ್ ಮಾಡಿದ್ದು, "ಓ ನಮ್ಮ ಮಗು ಬೆಳೆದಿದೆ. ಅದ್ಭುತವಾಗಿ ಕಾಣುತ್ತಿದೆ ಮತ್ತು ಈಗ ಜಗತ್ತೇ ಅವಳ ಜಗತ್ತು. ಅವಳು ಪ್ರಕಾಶಮಾನವಾಗಿ ಹೊಳೆಯಲಿ ಅಭಿನಂದನೆಗಳು ಎಂದು ಬರೆದಿದ್ದಾರೆ. ಇದಾದ ಬಳಿಕ ತಾಯಿ ಮಂಜುಳ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದು, ನನ್ನ ಜಾನುವಿಗೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ.
ಸಧ್ಯ ಮಹೇಶ್ ಬಾಬು ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ SSMB 29 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಎಸ್.ಎಸ್. ರಾಜಮೌಳಿ ಮತ್ತು ಅವರ ತಂಡವು ಚಿತ್ರದ ತಾರಾಗಣ ಮತ್ತು ವಿವರಗಳನ್ನು ಬಹಿರಂಗಪಡಿಸಿಲ್ಲ. ಇತ್ತೀಚೆಗೆ, ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಈ ಚಿತ್ರದಲ್ಲಿ ವಿಶೇಷ ನೃತ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ಧಿಯಾಗಿತ್ತು. (ಏಜೆನ್ಸೀಸ್)