ಆರೇ ದಿನಕ್ಕೆ ಕೆಟ್ಟುಹೋದ ಎಲೆಕ್ಟ್ರಿಕ್​ ಬೈಕ್​ ಕತ್ತೆಗೆ ಹೋಲಿಸಿ ಮೆರವಣಿಗೆ ಮಾಡಿದ ಗ್ರಾಹಕ!

Donkey
Published on

ಮುಂಬೈ: ತಾನು ಖರೀದಿಸಿದ ವಿದ್ಯುತ್​ ಚಾಲಿತ ದ್ವಿ ಚಕ್ರವಾಹನ ಕೆಲವೇ ದಿನದ ಬಳಿಕ ಕೆಟ್ಟುಹೋಗಿದ್ದರಿಂದ ಬೇಸತ್ತ ಮಾಲೀಕ ತನ್ನ ಬೈಕ್​ ನ್ನು ಕತ್ತೆಗೆ ಹೋಲಿಸಿ ಮೆರವಣಿಗೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಹಾರಾಷ್ಟ್ರದ ಬೀಡ್​ ಜಿಲ್ಲೆಯ ಸಚಿನ್​ ಗಿಟ್ಟೆ ಎಂಬುವವರು ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಖರೀದಿಸಿದ್ದಾರೆ. ಖರೀದಿಸಿದ ಕೇವಲ ಆರೇ ದಿನಕ್ಕೆ ಬೈಕ್​ ಕೆಟ್ಟುಹೋಗಿದೆ. ಈ ಬಗ್ಗೆ ಕಂಪನಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಕೋಪಗೊಂಡ ಈತ ಕತ್ತೆಯನ್ನು ತಂದು ಮೆರವಣಿಗೆ ಮಾಡಿ ಆಕ್ರೋಶ ಹೊರಹಾಕಿದ್ದಾನೆ.

ಅಷ್ಟೇ ಅಲ್ಲದೇ ಎಚ್ಚರ ಈ ಮೋಸಮಾಡುವ ಕಂಪನಿಯನ್ನು ನಂಬಬೇಡಿ ಎಂದು ಫಲಕ ಹಾಕಿಕೊಂಡು ಕಂಪನಿ ವಿರುದ್ಧ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net