Maharashtra Election |ಮಹಾರಾಷ್ಟ್ರದ ಮುಂದಿನ ಸಿಎಂ ದೇವೇಂದ್ರ ಫಡ್ನವೀಸ್; ಅಂತಿಮ ಫಲಿತಾಂಶಕ್ಕೂ​ಮುನ್ನವೇ ರಾರಾಜಿಸುತ್ತಿವೆ ಫೋಸ್ಟರ್​​

Untitled design - 2024-11-23T162922.082
Published on

ಮುಂಬೈ: ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಮಹಾರಾಷ್ಟ್ರದಲ್ಲಿ(Maharashtra Election) ಐತಿಹಾಸಿಕ ಗೆಲುವಿನ ಸಮೀಪದಲ್ಲಿದೆ. ಈ ಮಧ್ಯೆ ವಿಧಾನಸಭೆ ಚುನಾವಣೆಯ ಫಲಿತಾಂಶ ಬರುವ ಮುನ್ನವೇ ಶನಿವಾರ(ನವೆಂಬರ್​​ 23) ದೇವೇಂದ್ರ ಫಡ್ನವೀಸ್ ಅವರನ್ನು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ಪೋಸ್ಟರ್‌ಗಳು ರಾಜ್ಯದಲ್ಲಿ ರಾರಾಜಿಸುತ್ತಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ನಾಗ್ಪುರ ಸೌತ್ ವೆಸ್ಟ್​​ನಲ್ಲಿ ಫಡ್ನವೀಸ್ ಅವರು 27,386 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ದೇವೆಂದ್ರ ಫಡ್ನವೀಸ್​​ ಅವರು, ಮಹಾರಾಷ್ಟ್ರದ ಜನರು ನಮಗೆ ಅಭೂತಪೂರ್ವ ವಿಜಯವನ್ನು ನೀಡಿದ್ದಾರೆ. ಜನರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಅವರು ನೀಡಿದ ‘ಏಕ್ ಹೇ ತೋ ಸೇಫ್ ಹೇ’ ಎಂಬ ಘೋಷವಾಕ್ಯಕ್ಕೆ ತಕ್ಕಂತೆ ಎಲ್ಲ ವರ್ಗದ ಜನ ಒಗ್ಗಟ್ಟಾಗಿ ನಮಗೆ ಮತ ಹಾಕಿದ್ದಾರೆ. ಇದು ಮಹಾಯುತಿ, ಸಿಎಂ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ಅಜಿತ್ ಪವಾರ್, ರಾಮದಾಸ್ ಅಠವಳೆ ಅವರ ಗೆಲುವು. ಒಗ್ಗಟ್ಟಿನ ಗೆಲುವು ಎಂದು ಹೇಳಿದ್ದಾರೆ.

ಅಲ್ಲದೆ, ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಹುದ್ದೆಗೆ ಯಾವುದೇ ಗದ್ದಲವಿಲ್ಲ. ಮಹಾಯುತಿ ಪಕ್ಷಗಳ ನಾಯಕರು ನಿರ್ಧರಿಸುತ್ತಾರೆ ಎಂದು ಫಡ್ನವೀಸ್ ಹೇಳಿದ್ದಾರೆ. ಫಡ್ನವೀಸ್​​ ಅವರು ಈ ಹಿಂದೆ ಎರಡು ಬಾರಿ ಸಿಎಂ ಹುದ್ದೆ ಅಲಂಕರಿಸಿದ್ದಾರೆ. 2014ರಲ್ಲಿ 122 ಸ್ಥಾನಗಳನ್ನು ಗೆದ್ದು ತನ್ನ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದಾಗ ರಾಜ್ಯವನ್ನು ಮುನ್ನಡೆಸಲು ಬಿಜೆಪಿ ನಾಯಕತ್ವದಿಂದ ಆಯ್ಕೆಯಾಗಿದ್ದರು. ನವೆಂಬರ್ 23, 2019ರಂದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಸುಪ್ರೀಂ ಕೋರ್ಟ್ ಆದೇಶದ ಅವಿಶ್ವಾಸ ನಿರ್ಣಯ ನಡೆಯುವ ಮೊದಲು, ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮೂರು ದಿನಗಳ ನಂತರ ನವೆಂಬರ್ 26 ರಂದು ಫಡ್ನವೀಸ್ ರಾಜೀನಾಮೆ ನೀಡಿದರು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ

ಚುನಾವಣಾ ಆಯೋಗದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಬಿಜೆಪಿ ಇದುವರೆಗೆ ಒಂಬತ್ತು ಸ್ಥಾನಗಳನ್ನು ಗೆದ್ದು 125 ರಲ್ಲಿ ಮುನ್ನಡೆ ಸಾಧಿಸಿದೆ. ಶಿವಸೇನೆ ಮೂರು ಗೆದ್ದು 53 ಸ್ಥಾನಗಳಲ್ಲಿ ಮುಂದಿದೆ, ಎನ್‌ಸಿಪಿ ಎರಡು ಗೆದ್ದು 37 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಂವಿಎಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಶರದ್ಚಂದ್ರ ಪವಾರ್) ಅಭ್ಯರ್ಥಿಗಳು 11 ಸ್ಥಾನಗಳಲ್ಲಿ, ಕಾಂಗ್ರೆಸ್ 20 ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net