ಮಿಲಿಯನ್​ಗಟ್ಟಲೆ ಫಾಲೋವರ್ಸ್​ ಇದ್ರೂ ಎಲೆಕ್ಷನ್​​ನಲ್ಲಿ ಬೀಳಲಿಲ್ಲ ವೋಟ್​​; 131 ಮತ ಪಡೆದ ಅಜಾಜ್​ ಖಾನ್​ | Ajaz Khan

Untitled design - 2024-11-23T145644.749
Published on

ಮುಂಬೈ: ಬಿಗ್​ ಬಾಸ್ ಖ್ಯಾತಿಯ ಅಜಾಜ್ ಖಾನ್(Ajaz Khan) ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮುಜುಗರದ ಸೋಲಿನತ್ತಾ ಮುಖಮಾಡಿದ್ದಾರೆ. ವರ್ಸೋವಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಜಾಜ್​ ಖಾನ್​​​ 18 ಸುತ್ತಿನ ನಂತರ ಕೇವಲ 131 ಮತಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಅಜಾಜ್​ ಖಾನ್​ ಅವರಿಗಿಂತ ಹೆಚ್ಚು ನೋಟಾಕ್ಕೆ ಅತಿ ಮತ ಚಲಾವಣೆಯಾಗಿದೆ.

ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ವರ್ಸೋವಾ ಕ್ಷೇತ್ರದಲ್ಲಿ ಶಿವಸೇನೆಯ ಯುಬಿಟಿ ಅಭ್ಯರ್ಥಿ ಹರೂನ್ ಖಾನ್ 46,619 ಮತಗಳೊಂದಿಗೆ ಮುನ್ನಡೆಯಲ್ಲಿದ್ದಾರೆ. 747 ಮತಗಳನ್ನು ಪಡೆಯುವ ಮೂಲಕ ನೋಟಾ ಆಯ್ಕೆಗಿಂತಲೂ ಅಜಾಜ್ ಖಾನ್ ಹಿಂದುಳಿದಿದ್ದಾರೆ. ಈ ಕ್ಷೇತ್ರದಲ್ಲಿ ಶೇ.51.2ರಷ್ಟು ಮತದಾನವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ 5.6 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್​​​ ಹೊಂದಿರುವ ಜನಪ್ರಿಯ ನಟ ಅಜಾಜ್​ ಖಾನ್​​​ ಕೇವಲ 131 ಮತಗಳನ್ನು ಗಳಿಸಿದ್ದಾರೆ ಎಂಬ ಸುದ್ದಿ ವೈರಲ್​​​​ ಆಗುತ್ತಿದೆ. ಅಜಾಜ್ ಖಾನ್ ಅವರು ಆಜಾದ್ ಸಮಾಜ ಪಕ್ಷ(ಕಾನ್ಶಿ ರಾಮ್)ದಿಂದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಗುಜರಾತ್‌ನ ಅಹಮದಾಬಾದ್‌ನಲ್ಲಿ ಜನಿಸಿದ ಅಜಾಜ್​​ ಖಾನ್​ ದಿಯಾ ಔರ್ ಬಾತಿ ಹಮ್ ಮತ್ತು ಕರಮ್ ಅಪ್ನಾ ಅಪ್ನಾ ಮುಂತಾದ ಕಾರ್ಯಕ್ರಮಗಳೊಂದಿಗೆ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ರಕ್ತ ಚರಿತ್ರೆ ಮತ್ತು ಅಲ್ಲಾ ಕೆ ಬಂದೆ ಮುಂತಾದ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ವಿಧಾನಸಭಾ ಚುನಾವಣೆಯ ಮತ ಎಣಿಕೆ ಶನಿವಾರ ಮುಂದುವರಿದಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಮಹಾಮೈತ್ರಿಕೂಟವು ರಾಜ್ಯದಲ್ಲಿ 288 ವಿಧಾನಸಭಾ ಸ್ಥಾನಗಳ ಪೈಕಿ 217 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿ ಪ್ರಕಾರ ಈ ಅಂಕಿಅಂಶವನ್ನು ನೀಡಲಾಗಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ನವೆಂಬರ್ 20 ರಂದು ಮತದಾನ ನಡೆದಿತ್ತು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net