ಪ್ರಯಾಗ್ರಾಜ್: ಪ್ರಸ್ತುತ ನಡೆಯುತ್ತಿರುವ ಕುಂಭಮೇಳದಲ್ಲಿ ತನ್ನ ಕಣ್ಣಿನ ಮೂಲಕವೇ ಎಲ್ಲರ ಗಮನ ಸೆಳೆದಿರುವ ಯುವತಿ ಮೊನಾಲಿಸಾ (Monalisa) ಇಂಟರ್ನೆಟ್ ಸೆನ್ಸೇಷನ್ ಎಂದರೆ ತಪ್ಪಾಗಲಾರದು. ತನ್ನ ಕಣ್ಣಿನ ನೋಟದ ಮೂಲಕವೇ ಈಗಾಗಲೇ ಹಿಂದಿ ಚಿತ್ರದಲ್ಲಿ ನಟಿಸಲು ಅವಕಾಶ ಪಡೆದಿರುವ ಮೊನಾಲಿಸಾ ಇದೀಗ ಆಭರಣ ಕಂಪನಿ ಒಂದರ ರಾಯಭಾರಿಯಾಗಿ ನೇಮಕಗೊಂಡಿದ್ದು, ಈ ಸುದ್ದಿ ಸದ್ಯ ವೈರಲ್ ಆಗಿದೆ.
ಕೇರಳ ಮೂಲದ ಪ್ರತಿಷ್ಠಿತ ಆಭರಣ ಕಂಪನಿಯ ರಾಯಭಾರಿಯಾಗಿ ಮೊನಾಲಿಸಾ (Monalisa) ನೇಮಕಗೊಂಡಿದ್ದು, ಈ ಸಂಬಂಧ ಕಂಪನಿ ಅಧಿಕೃತವಾಗಿ ಘೋಷಿಸಬೇಕಿದೆ. ರಾಯಭಾರಿಯಾಗಲಿರುವ ಮೊನಾಲಿಸಾಗೆ ದುಬಾರಿ ಸಂಭಾವನೆ ನೀಡಲಾಗುತ್ತಿದ್ದು, ಹಿಂದಿ ಸಿನಿಮಾ ಸೆಟ್ಟೇರುವ ಮುನ್ನವೇ ಮೊನಾಲಿಸಾ ಸಾಲು ಸಾಲು ಅವಕಾಶಗಳು ಪಡೆಯುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿ ಮೊನಾಲಿಸಾ (Monalisa) ಮುಗ್ಧ ನಗು, ನೀಲಿ ಕಣ್ಣುಗಳ ಮೂಲಕವೇ ಎಲ್ಲರ ಗಮನಸೆಳೆದು ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಮೊನಾಲಿಸಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.
ನಮಸ್ತೇ ನಾನು ಮಹಾಕುಂಭಕ್ಕೆ ಹೋಗಿ ರುದ್ರಾಕ್ಷಿಗಳನ್ನು ಮಾರುತ್ತಿದ್ದೆ. ಆದರೆ ವಿಧಿ ನನಗಾಗಿ ಬೇರೆ ಯೋಜನೆಗಳನ್ನು ಹೊಂದಿತ್ತು. ಶಿವ ಮತ್ತು ಸಂತರ ಆಶೀರ್ವಾದದಿಂದ, ನಾನು ಜನಪ್ರಿಯತೆಯನ್ನು ಗಳಿಸಿದೆ. ನಾನು ನಿಮ್ಮೆಲ್ಲರಿಗೂ ನಿಜವಾಗಿಯೂ ಕೃತಜ್ಞಳಾಗಿದ್ದೇನೆ. ಈ ಕಾರಣದಿಂದಾಗಿ, ನನಗೆ ಬಾಲಿವುಡ್ ಚಿತ್ರವೊಂದರ ಆಫರ್ ಬಂದಿದೆ. ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ ಅವರು ವೈಯಕ್ತಿಕವಾಗಿ ನನ್ನ ಮನೆಗೆ ಭೇಟಿ ನೀಡಿ ಈ ಅವಕಾಶವನ್ನು ನೀಡಿದ್ದಾರೆ. ನಾನು ಯಾವಾಗಲೂ ನಾಯಕಿಯಾಗುವ ಕನಸು ಕಂಡಿದ್ದೆ. ಇಂದು ಆ ಕನಸು ನನಸಾಗಿದೆ. ಈ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
RCB ನಾಯಕನಾಗಿ ರಜತ್ ನೇಮಕಗೊಂಡ ಹಿಂದಿದೆ ಈ ಏಳು ಕಾರಣಗಳು; ವಿವರ ಕೇಳಿ ಈ ಸಲ ಕಪ್ ನಮ್ದೆ ಎಂದ ಫ್ಯಾನ್ಸ್