Mahakumbh 2025 : ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾ ಕುಂಭಮೇಳವು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದೆ. ಇದು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಂಗಮ ಮಾತ್ರವಲ್ಲದೆ, ಜಾಗತಿಕ ಏಕತೆಯ ಸಂಕೇತವೂ ಆಗಿದೆ. ಲಕ್ಷಾಂತರ ಭಕ್ತರ ಜೊತೆಗೆ, ಪ್ರಪಂಚದ ವಿವಿಧ ಮೂಲೆಗಳಿಂದ ಬರುತ್ತಿರುವ ವಿದೇಶಿ ಪ್ರತಿನಿಧಿಗಳು ಸಹ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಈ ಬಾರಿ 10 ದೇಶಗಳಿಂದ 21 ಸದಸ್ಯರ ಅಂತಾರಾಷ್ಟ್ರೀಯ ನಿಯೋಗವು ಮಹಾ ಕುಂಭಮೇಳದಲ್ಲಿ ಭಾಗವಹಿಸಿತ್ತು. ಅವರಲ್ಲಿ ಫಿಜಿ, ಫಿನ್ಲ್ಯಾಂಡ್, ಗಯಾನಾ, ಮಲೇಶಿಯಾ, ಮಾರಿಷಸ್, ಸಿಂಗಾಪುರ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರತಿನಿಧಿಗಳು ಸೇರಿದ್ದರು. ಈ ಪ್ರತಿನಿಧಿಗಳು ಕುಂಭಮೇಳದ ವ್ಯವಸ್ಥೆಗಳನ್ನು ಪರಿಶೀಲಿಸಿದರು ಮತ್ತು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು ಹಾಗೂ ಸಂತರಿಂದ ಭಾರತೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಬಗ್ಗೆ ತಿಳಿದುಕೊಂಡರು.
ಈ ನಿಯೋಗದ ವಿಶೇಷ ಸದಸ್ಯೆ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮುಸ್ಲಿಂ ಮಹಿಳೆ ಸ್ಯಾಲಿ ಎಲ್ ಅಜಾಬ್, ಮಹಾ ಕುಂಭಮೇಳದ ಭವ್ಯ ವ್ಯವಸ್ಥೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಮಧ್ಯಪ್ರಾಚ್ಯದಿಂದ ಭಾರತಕ್ಕೆ ಬರುವ ಮೊದಲು ನಾನು ಇಷ್ಟೊಂದು ದೊಡ್ಡ ಧಾರ್ಮಿಕ ಕಾರ್ಯಕ್ರಮವನ್ನು ನೋಡಿಲ್ಲ. ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲ, ಇಲ್ಲಿನ ವ್ಯವಸ್ಥೆಗಳು ಮತ್ತು ಭದ್ರತೆಯೂ ಅಭೂತಪೂರ್ವವಾಗಿದೆ ಎಂದು ಹೇಳಿದರು.
ಇನ್ನೊಂದೆಡೆ ಮುಂಬೈನ ಶಬ್ನಮ್ ಶೇಖ್ ಎಂಬ ಯುವ ಮುಸ್ಲಿಂ ಮಹಿಳೆ ಕೂಡ ಮಹಾ ಕುಂಭಮೇಳದಲ್ಲಿ ಭಾಗವಹಿಸಿದರು. ಶಬ್ನಮ್ ಶೇಖ್ ಕುಂಭಮೇಳದಲ್ಲಿ ಅನೇಕ ಸಂತರು ಮತ್ತು ಮಹಾಪುರುಷರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಅಲ್ಲದೆ, ಅನೇಕ ಸನಾತನ ಆಚರಣೆಗಳಲ್ಲಿ ಭಾಗವಹಿಸಿದರು. ಯೋಗಿ ಸರ್ಕಾರದ ವ್ಯವಸ್ಥೆಗಳನ್ನು ಅಪ್ರತಿಮವೆಂದು ಬಣ್ಣಿಸಿದರು. ಅಯೋಧ್ಯಾ ಪೀಠಾಧೀಶ್ವರ ಜಗದ್ಗುರು ಆಚಾರ್ಯ ಪರಮಹಂಸ ದಾಸ್ ಸನ್ಯಾಸಿ ಶಿಬಿರಕ್ಕೂ ಶಬ್ನಮ್ ಶೇಖ್ ಭೇಟಿ ನೀಡಿದರು.
ಅಂದಹಾಗೆ ಮಹಾ ಕುಂಭಮೇಳವು ಜನವರಿ 13ರಿಂದ ಆರಂಭವಾಗಿದ್ದು, ಫೆಬ್ರವರಿ 26 ರವರೆಗೆ 45 ದಿನಗಳ ಕಾಲ ನಡೆಯಲಿದೆ. ಈ ವರ್ಷ ಮಹಾ ಕುಂಭಮೇಳಕ್ಕೆ 40 ಕೋಟಿಗೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿದೆ. ಬರುವ ಯಾತ್ರಿಕರು ಯಾವುದೇ ಅನಾನುಕೂಲತೆಯನ್ನು ಎದುರಿಸದಂತೆ ನೋಡಿಕೊಳ್ಳಲು 1.6 ಲಕ್ಷ ಡೇರೆಗಳು ಮತ್ತು 1.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಭದ್ರತೆಗಾಗಿ 55 ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಮತ್ತು 45 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಕನ್ನಡ ಸೇರಿದಂತೆ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಸೇವೆಗಳನ್ನು ಒದಗಿಸುವ ಕಾಲ್ ಸೆಂಟರ್‌ಗಳನ್ನು ಸಹ ಯುಪಿ ಸರ್ಕಾರ ಸ್ಥಾಪಿಸಿದೆ. (ಏಜೆನ್ಸೀಸ್)
ಬೇಕಂತಲೇ ಕಿಸ್ಸಿಂಗ್ ದೃಶ್ಯ ಸೇರಿಸಿದ್ರಾ ಧನುಷ್!? ಬಿರುಗಾಳಿ ಎಬ್ಬಿಸಿದ ಖ್ಯಾತ ನಿರ್ದೇಶಕನ ಹೇಳಿಕೆ! Dhanush