ಮಹಾ ಡಿಸಿಎಂ ಏಕನಾಥ್​ ಶಿಂಧೆ ಕಾರನ್ನು ಸ್ಫೋಟ ಮಾಡುವುದಾಗಿ ಬೆದರಿಕೆ ಕರೆ! | Threat

dk - 2025-02-20T164457.581
Published on

Threat: ಮಹಾರಾಷ್ಟ್ರದ ಮಾಜಿ ಸಿಎಂ, ಹಾಲಿ ಡಿಸಿಎಂ ಆಗಿರುವ ಏಕನಾಥ್​ ಶಿಂಧೆ ಕಾರನ್ನು ಸ್ಫೋಟ ಮಾಡುವುದಾಗಿ ಬೆದರಿಕೆ ಕಾಲ್​ಗಳು ಬರುತ್ತಿವೆ ಎಂದು ಮುಂಬೈ ಪೊಲೀಸ್​ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಗುರುವಾರ ಬೆಳಗ್ಗೆ ಇಲ್ಲಿನ ಗೋರೆಗಾಂವ್​ ಮತ್ತು ಜೆಜೆ ಮಾರ್ಗ್​ ಪೊಲೀಸ್​ ಠಾಣೆಗಳಿಗೆ ಮತ್ತು ರಾಜ್ಯ ಸರ್ಕಾರ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಗೆ ಬೆದರಿಕೆ ಕರೆ ಬಂದಿವೆ. ಕರೆ ಮಾಡಿದ ವ್ಯಕ್ತಿ ಏಕನಾಥ್​ ಶಿಂಧೆ ಕಾರನ್ನು ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಮಾಧ್ಯಮಗಳ ವರದಿ ಪ್ರಕಾರ, ಏಕನಾಥ್​ ಶಿಂಧೆ ಅವರಿಗೆ ಬೆದರಿಕೆ ಕರೆ ಬಂದ ಹಿನ್ನೆಲಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೇಖಾಗುಪ್ತ ಸಿಎಂ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಹಾ ಸಿಎಂ ದೇವೇಂದ್ರ ಫಡ್ನವೀಸ್​ ಮತ್ತು ಡಿಸಿಎಂ ಏಕನಾಥ್​ ಶಿಂಧೆ ಭಾಗವಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net