

ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಜೀಣೋದ್ಧಾರ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವಾ ಮಹೋತ್ಸವ ಮುಂದಿನ ಮಾ.27ರಿಂದ ಏ.7ರ ತನಕ ಜರುಗಲಿದ್ದು, ಸಮಾರಂಭದ ಯಶಸ್ವಿಗಾಗಿ ಮುಳಿಯಾರು ಪ್ರಾದೇಶಿಕ ಸಮಿತಿ ರಚನೆ ಸಭೆ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ನಡೆಯಿತು.
ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ಕಾಮತ್ ದಿಕ್ಸೂಚಿ ಮಾತುಗಳನ್ನಾಡಿದರು. ಮಧೂರು ಶ್ರೀಕ್ಷೇತ್ರದ ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಸಮಾರಂಭದ ಸಮಗ್ರ ಮಾಹಿತಿಗಳನ್ನಿತ್ತರು. ಗಿರೀಶ್ ಸಂಧ್ಯಾ ಶುಭಾಶಂಸನೆಗೈದರು. ರತನ್ ಕುಮಾರ್ ಕಾಮಡ, ರಾಮಯ್ಯ ಭಟ್, ಸುರೇಶ ನಾಯಕ್, ಮುರಳಿ ಗಟ್ಟಿ, ಮುರಳಿ ಬಂದಡ್ಕ, ಯೋಗೀಶ್ ಮಧೂರು, ಜಗದೀಶ್ ಕೂಡ್ಲು ಉಪಸ್ಥಿತರಿದ್ದರು.
ಮುಳಿಯಾರು ಪ್ರಾದೇಶಿಕ ಸಮಿತಿ ರಚಿಸಲಾಯಿತು. ಸೀತಾರಾಮ ಬಳ್ಳುಳ್ಳಾಯ ಗೌರವಾಧ್ಯಕ್ಷರು, ಗೋವಿಂದ ಬಳ್ಳಮೂಲೆ ಅಧ್ಯಕ್ಷರು, ರಾಜನ್ ಮುಳಿಯಾರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸಮಿತಿಗೆ ಇತರ ಸದಸ್ಯರನ್ನು ಮುಂದಿನ ಸಭೆಯಲ್ಲಿ ಸೇರ್ಪಡೆಗೊಳಿಸಲು ತೀರ್ಮಾನಿಸಲಾಯಿತು. ಗೋವಿಂದ ಬಳ್ಳಮೂಲೆ ಸ್ವಾಗತಿಸಿದರು. ರಾಜನ್ ಮುಳಿಯಾರು ವಂದಿಸಿದರು.