ಮಾರ್ಪನಡ್ಕದಲ್ಲಿ ಕುಣಿತ ಭಜನೆ

bhajane
Published on

ಬದಿಯಡ್ಕ: ಮಾರ್ಪನಡ್ಕದಲ್ಲಿ ಓಣಂ ಆಚರಣೆ ಹಾಗೂ ಮಾತಾ ನೃತ್ಯ ಕುಣಿತ ಭಜನಾ ಸಂಘದ ದ್ವಿತೀಯ ವಾರ್ಷಿಕೋತ್ಸವವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಜಯರಾಜ್ ಕುಣಿಕುಳ್ಳಾಯ ಉದ್ಘಾಟಿಸಿದರು. ಚಂದ್ರಶೇಖರ, ಕುಣಿತ ಭಜನೆಯ ನೃತ್ಯಗುರು ವಿಶ್ವನಾಥ ಬಲವತಂಡ್ಕ ಉಪಸ್ಥಿತರಿದ್ದರು. ಬಳಿಕ ಕುಣಿತ ಭಜನೆ, ಹೂ ರಂಗೋಲಿ, ಮಡಕೆ ಒಡೆಯುವ ಸ್ಪರ್ಧೆಗಳು ನಡೆದವು.

ಸಮಾರೋಪ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉದಯ ಕುಮಾರ್ ಅಧ್ಯಕ್ಷತೆ ವಹಿಸಿದರು. ಕೃಷ್ಣ ನಾಯ್ಕ ಸ್ವಾಗತಿಸಿದರು. ರವಿಕಲ ಶಿಬು ವಂದಿಸಿದರು. ಚೇತನಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net