ದರ್ಶನ್​​ ಈಗಾಗಲೇ ಸತ್ತು ಹೋಗಿದ್ದಾನೆ, ಶಿವಣ್ಣ ಇನ್ನು ಕೆಲವೇ... ಮಡೆನೂರು ಮನು ಆಡಿಯೋ ವೈರಲ್!? Madenuru Manu

Madenuru Manu
Published on

Madenuru Manu : ಒಂದು ಕಡೆ ತಮ್ಮ ಅಭಿನಯದ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಬಿಡುಗಡೆಯಾಗಿದೆ. ಇನ್ನೊಂದೆಡೆ ಸಹನಟಿಯ ಮೇಲಿನ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಬಂಧನವಾಗಿ ಜೈಲು ಪಾಲಾಗಿದ್ದಾರೆ. ಇದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅವರ ಸದ್ಯದ ಪರಿಸ್ಥಿತಿ. ಪ್ರಸ್ತುತ ಈ ಒಂದು ವಿವಾದ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿದೆ.

ತನಗೆ ಬಲವಂತದಿಂದ ಎಣ್ಣೆ ಕುಡಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ವಿಡಿಯೋ ರೆಕಾರ್ಡ್​ ಕೂಡ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಮಡೆನೂರು ಮನು ವಿರುದ್ಧ ಸಹನಟಿ ಗಂಭೀರ ಆರೋಪ ಮಾಡಿದ್ದು, ಎಫ್​ಐಆರ್​ ದಾಖಲಿಸಿರುವ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ಆರೋಪಿ ಮನುರನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಮಡೆನೂರು ಮನುಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋವೊಂದು ವೈರಲ್​ ಆಗುತ್ತಿದೆ.

ಮದ್ಯದ ಅಮಲಿನಲ್ಲಿ ಮನು ಮಾತನಾಡಿರುವ ಆಡಿಯೋ ಎನ್ನಲಾಗಿದೆ. ಆಡಿಯೋದಲ್ಲಿರುವ ಮಾತುಗಳನ್ನು ಕೇಳಿ ಕನ್ನಡ ಚಿತ್ರರಂಗ ಶಾಕ್​ ಆಗಿದೆ. ಅಲ್ಲದೆ, ಸಿನಿ ಅಭಿಮಾನಿಗಳು ಕೂಡ ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಆಡಿಯೋದಿಂದ ಮುಂಬರುವ ದಿನಗಳಲ್ಲಿ ಮನುಗೆ ಸಂಕಷ್ಟ ಎದುರಾಗುವ ಸಾಧ್ಯತೆಯೂ ಇದೆ.

ಆಡಿಯೋದಲ್ಲಿ ಏನಿದೆ?

ಅಷ್ಟಕ್ಕೂ ಆಡಿಯೋದಲ್ಲಿ ಏನಿದೆ ಅನ್ನೋದನ್ನು ನೋಡುವುದಾದರೆ, ಮನು ಅವರು ಕನ್ನಡ ಚಿತ್ರರಂಗದ ಸ್ಟಾರ್​ ನಟರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ನಟ ಶಿವರಾಜ್​ಕುಮಾರ್​ ಇನ್ನು ಐದಾರು ವರ್ಷ ಬದುಕಿದರೆ ಹೆಚ್ಚು, ಆನಂತರ ಅವರು ಸತ್ತು ಹೋಗುತ್ತಾರೆ. ನಟ ದರ್ಶನ್​ ಅಂತೂ ಈಗಾಗಲೇ ಸತ್ತು ಹೋಗಿದ್ದಾನೆ. ಇನ್ನು ನಾಲ್ಕು ವರ್ಷ ಆತನಿಗೆ ಕ್ರೇಜ್​ ಇದ್ರೆ ಅದೇ ಹೆಚ್ಚು. ಶೀಘ್ರದಲ್ಲೇ ಅವನ ಕ್ರೇಜ್​ ಕಡಿಮೆಯಾಗಲಿದೆ. ಇನ್ನು ನಟ ಧ್ರುವ ಸರ್ಜಾ ಹೆಚ್ಚೆಂದರೆ 8 ವರ್ಷ ಮಾತ್ರ ಆತನ ಮಾರ್ಕೆಟ್​ ಇರಲಿದೆ. ಆಮೇಲೆ ಮಾರ್ಕೆಟ್​ ಬಿದ್ದು ಹೋಗಲಿದೆ. ಈ ಮೂರು ಮಂದಿಯ ನಡುವೆ ಕಾಂಪಿಟೇಶನ್ ಕೊಡಲು ನಿಂತಿರುವ ಗಂಡು ಗಲಿ ಕಣ್ರಿ ನಾನು ಎಂದು ಕುಡಿದ ಅಮಲಿನಲ್ಲಿ ನಾಲಿಗೆ ಹರಿಬಿಡಲಾಗಿದೆ.

ಆಡಿಯೋದಲ್ಲಿರುವುದು ಮಡೆನೂರು ಮನು ಅವರ ಧ್ವನಿಯೇ ಎಂಬುದು ಖಚಿತವಾಗಿಲ್ಲ. ಆದರೆ, ಸದ್ಯದ ವಿವಾದದ ನಡುವೆ ಈ ಆಡಿಯೋ ಭಾರಿ ಸಂಚಲನ ಮೂಡಿಸಿದೆ. ಆಡಿಯೋ ಕೇಳಿದ ಬಹುತೇಕ ಮಂದಿ ಇದು ಮನು ಅವರದ್ದೇ ಧ್ವನಿ ಎನ್ನುತ್ತಿದ್ದಾರೆ. ಯಾವುದೂ ಎಣ್ಣೆ ಪಾರ್ಟಿಯ ಸಮಯದಲ್ಲಿ ಕಂಠಪೂರ್ತಿ ಕುಡಿದು ಈ ರೀತಿ ಅಹಂಕಾರದಿಂದ ಮಾತನಾಡಿದ್ದಾನೆ. ಆ ಸಂದರ್ಭದಲ್ಲಿ ಆತನ ಸ್ನೇಹಿತರೇ ಆಡಿಯೋ ರೆಕಾರ್ಡ್​ ಮಾಡಿ, ವಿವಾದದ ನಡುವೆ ಹರಿಬಿಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋ ಕೇಳಿದ ಅಭಿಮಾನಿಗಳು ಆತನ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನಿಂದ ಬಂದ ಯಶಸ್ಸು ಈತನ ನೆತ್ತಿಗೇರಿದೆ. ಮೊದಲ ಸಿನಿಮಾಗೆ ಇಷ್ಟೊಂದು ಅಹಂಕಾರ ಇರಬಾರದು. ಹಿರಿಯರಿಗೆ ಗೌರವ ಕೊಡುವುದನ್ನು ಮೊದಲು ಕಲಿಯಬೇಕು. ಈತ ಖಂಡಿತ ಏಳಿಗೆ ಹೊಂದುವುದಿಲ್ಲ ಎಂದೆಲ್ಲ ಕಾಮೆಂಟ್​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net