ಲೂಸಿಯಾ ಪವನ್ ಕುಮಾರ್ ಕೆಲಸಕ್ಕೆ ಮೆಚ್ಚುಗೆ: ಸಿನಿ ಕಾರ್ಮಿಕರಿಗೆ ನಾಲ್ಕೇ ದಿನದಲ್ಲಿ 4.5 ಲಕ್ಷ ಹಣ ಸಂಗ್ರಹಣೆ

Pavan
Published on

ಬೆಂಗಳೂರು: ಕರೊನಾದಿಂದಾಗಿ ಸಿನಿಮಾರಂಗ ಸ್ತಬ್ಧವಾಗಿದೆ. ಶೂಟಿಂಗ್ ಸೇರಿ ಎಲ್ಲ ಕೆಲಸಗಳೂ ಸ್ಥಗಿತಗೊಂಡಿವೆ. ಸಿನಿಮಾ ತಾರೆಯರು ಮನೆಯಲ್ಲಿ ಬಂಧಿಯಾಗಿದ್ದಾರೆ. ನಿರ್ದೇಶಕರು-ತಂತ್ರಜ್ಞರು ರೆಸ್ಟ್ ಮೂಡ್‌ನಲ್ಲಿದ್ದಾರೆ. ಆದರೆ, ಸಿನಿಮಾಕ್ಕಾಗಿ ದುಡಿಯುವ ದಿನಗೂಲಿ ಕಾರ್ಮಿಕರ ಸ್ಥಿತಿ ಹೇಗಿದೆ? ನಿಜಕ್ಕೂ ಅವರೆಲ್ಲರದ್ದೂ ಸದ್ಯ ಅತಂತ್ರ!

ಅಂಥವರ ಸ್ಥಿತಿಯನ್ನು ಸುಧಾರಿಸುವ ದೃಷ್ಟಿಯಿಂದ ನಟ, ನಿರ್ದೇಶಕ, ನಿರ್ಮಾಪಕ ‘ಲೂಸಿಯಾ’ ಪವನ್ ಕುಮಾರ್ ಹೊಸ ಕೆಲಸಕ್ಕೆ ಮುಂದಾಗಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಸಿನಿಮಾ ಕಾರ್ಮಿಕರ ಸಲುವಾಗಿ ಫಂಡ್ ರೈಸ್ ಮಾಡಿ, ಅವಶ್ಯಕತೆ ಇದ್ದವರಿಗೆ ಹಂಚಿಕೆ‌ಮಾಡಲು ನಿರ್ಧರಿಸಿದ್ದರು. ಅದರಂತೆ ಜಾಲತಾಣದಲ್ಲಿ ಹಂಚಿಕೊಂಡ ಯುಪಿಐ ಐಡಿ ಮೂಲಕ ನಾಲ್ಕು ದಿನದಲ್ಲಿ ಒಟ್ಟು 433 ಜನರಿಂದ 4,58,776 ರೂಪಾಯಿ ಸಂಗ್ರಹವಾಗಿದೆ ಎಂದು ಸ್ವತಃ ಪವನ್ ಕುಮಾರ್ ತಿಳಿಸಿದ್ದಾರೆ.

ಈ‌ ಮೊತ್ತವನ್ನು ಅವಶ್ಯಕತೆ ಇರುವ ಸಿನಿಮಾ ಕೂಲಿ ಕಾರ್ಮಿಕರ ಕುಟುಂಬಕ್ಕೆ ನೀಡುವುದಾಗಿ ಮಾಹಿತಿ ನೀಡಿದ್ದಾರೆ. ಪವನ್ ಕುಮಾರ್ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಇನ್ನುಳಿದ ಸ್ಟಾರ್ ನಟರ ನಿರ್ಲಕ್ಷ್ಯಕ್ಕೆ ಗರಂ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net